ಸ್ವೀಟ್ಸ್ ತಿನ್ನುವ ಮೊದಲು ಈ ವಿಡಿಯೋವನ್ನೊಮ್ಮೆ ನೋಡಿಬಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಸೆ.01 : ನೀವು ಸ್ವೀಟ್ಸ್ ಇಷ್ಟಪಡುವವರಾಗಿದ್ದರೆ ಮತ್ತೊಮ್ಮೆ ಸ್ವೀಟ್ ತಿನ್ನುವ ಮೊದಲು ಈ ವಿಡಿಯೋವನ್ನೊಮ್ಮೆ ನೋಡಿಬಿಡಿ. ಸ್ವೀಟ್ ಮಾರಾಟದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕಂಡು ಬಂದ ಚಿತ್ರಣ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಸಿಹಿ ತಿನಿಸುಗಳ ಮೇಲೆ ಹಗಲಿನಲ್ಲೇ ಬೃಹತ್ ಗಾತ್ರದ ಇಲಿಯೊಂದು ಓಡಾಡುತ್ತಿರುವ ದೃಶ್ಯವನ್ನು ಗ್ರಾಹಕರೊಬ್ಬರು ಸೆರೆ ಹಿಡಿದಿದ್ದಾರೆ. ಶೋಕೇಸ್ ನಲ್ಲಿ ಇಡಲಾಗಿದ್ದ ಸ್ವೀಟ್ ಗಳ ಮೇಲೆ ಕಾಣಿಸಿಕೊಳ್ಳುವ ಇಲಿ, ಅಲ್ಲಿದ್ದ ಸ್ವೀಟ್ ಗಳ ರುಚಿಯನ್ನು ನೋಡಿ ಅವುಗಳ ಮೇಲೆಲ್ಲಾ ಓಡಾಡಿದೆ.

ರುಚಿ, ಶುಚಿ ಎಂದೇ ಹೇಳುವ ಪ್ರತಿಷ್ಠಿತ ಹೋಟೆಲ್ ನಲ್ಲಿ ಸ್ವೀಟ್ ಮೇಲೆ ಇಲಿ ಓಡಾಡುತ್ತಿರುವ ಈ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin