ಹೆಂಡತಿಯ ಶೀಲ ಶಂಕಿಸಿ, 2 ತಿಂಗಳ ಶಿಶುವನ್ನೇ ಕೊಂದ ಪಾಪಿ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

Baby--01

ನವದೆಹಲಿ, ಏ.22-ಹಸುಳೆಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವ ಪ್ರಕರಣಗಳ ನಡುವೆಯೇ ಮತ್ತೊಂದು ಕ್ರೂರ ಘಟನೆ ನಡೆದಿದೆ. ತಾನು ಈ ಮಗುವಿನ ತಂದೆಯಲ್ಲ ಎಂಬ ಶಂಕೆಯಿಂದ 17 ವರ್ಷ ಅಪ್ರಾಪ್ತನೊಬ್ಬ ತನ್ನ ಎರಡು ತಿಂಗಳ ಗಂಡು ಮಗುವನ್ನು ಕೊಂದಿರುವ ಹೀನ ಘಟನೆ ರಾಜಧಾನಿ ದೆಹಲಿಯಲ್ಲಿ ವರದಿಯಾಗಿದೆ. ದೆಹಲಿಯ ಮಂಗಲಪುರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಆರೋಪಿಯು ಹಸುಳೆ ಸಾಯುವ ತನಕ ಬಲವಾಗಿ ಗುದ್ದಿ ಗುದ್ದಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಗುವಿನ ತಾಯಿಯೂ ಅಪ್ರಾಪ್ತೆಯಾಗಿದ್ದು, ಈಕೆ ಇಲ್ಲದ ಸಮಯದಲ್ಲಿ ಶಿಶುವಿನ ಕಗ್ಗೊಲೆ ನಡೆದಿದೆ.   ಹತ್ತು ತಿಂಗಳ ಹಿಂದೆ ಇವರ ವಿವಾಹವಾಗಿತ್ತು. ಅನುಮಾನ ಸ್ವಭಾವ ಈತ, ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ಧಾಳೆ. ಈ ಮಗು ನನ್ನದಲ್ಲ ಎಂಬ ಗುಮಾನಿ ಮೇರೆಗೆ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin