‘ಹೇಮಾಮಾಲಿನಿ ಪ್ರತಿದಿನ ಮದ್ಯಪಾನ ಮಾಡುತ್ತಾರೆ’ : ಮಹಾರಾಷ್ಟ್ರದ ಶಾಸಕನ ವಿವಾದಿತ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

HemaMalini--01

ಮುಂಬೈ,ಏ.14-ಖ್ಯಾತ ಅಭಿನೇತ್ರಿ ಮತ್ತು ಸಂಸದೆ ಹೇಮಾಮಾಲಿನಿ ಪ್ರತಿದಿನ ಮದ್ಯಪಾನ ಮಾಡುತ್ತಾರೆ. ಹಾಗಂತ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಇಂದು ಮಹಾರಾಷ್ಟ್ರದ ವಿವಾದಾತ್ಮಕ ಶಾಸಕ(ಪಕ್ಷೇತರ) ಬಚ್ಚು ಕಾಡು ಅವರ ಹೇಳಿಕೆ. ವಿವಾದಾಸ್ಪದ ಹೇಳಿಕೆಗಳ ಮೂಲಕ ಈಗಾಗಲೇ ಸುದ್ದಿಯಲ್ಲಿರುವ ಅವರು, ಈ ಸಲವೂ ಎಲ್ಲೆ ಮೀರಿ ಮಾತನಾಡಿ ಸಮಸ್ಯೆಗೆ ಸಿಲುಕಿದ್ದಾರೆ.  ನಾಂದೇಡ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಮದ್ಯಪಾನದಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿ ಈ ರೀತಿ ಮರುಪ್ರಶ್ನೆ ಹಾಕಿದರು.

ಶೇ.75 ಸಂಸದರು, ಶಾಸಕರು, ಪತ್ರಕರ್ತರು ಕುಡಿಯುತ್ತಾರೆ. ಅಷ್ಟೇ ಏಕೆ ಹೇಮಾಮಾಲಿನಿ ಸಹ ಬಹಳ ವರ್ಷದಿಂದ ಮದ್ಯಪಾನ ಮಾಡುತ್ತಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿ ವಿವಾದಕ್ಕೆ ಒಳಗಾಗಿದ್ದಾರೆ.   ಈ ಶಾಸಕನ ಮೇಲೆ ಹಲ್ಲೆ , ನಿಂದನೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳ ಆರೋಪಗಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin