ಹೊಸ ವರ್ಷಾಚರಣೆ ವೇಳೆ ಬೆಂಗಳೂರಲ್ಲಿ ನಡೆದ ಕಾಮಚೇಷ್ಟೆಗೆ ಟ್ವಿಟ್ಟರ್’ನಲ್ಲಿ ಅಕ್ಷಯ್ ಆಕ್ರೋಶ (Video)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜ.05 :  ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಕಿಗ ದೌರ್ಜನ್ಯ ರಾಷ್ಟ್ರವ್ಯಾಪಿ  ಸುದ್ದಿಯಾಗಿದ್ದು, ಈ ಘಟನೆ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ-ದುರಾಚಾರಗಳ ಬಗ್ಗೆ ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದು ನಿಜಕ್ಕೂ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅಕ್ಕಿ ಕಟುವಾಗಿ ಟೀಕಿಸಿದ್ದಾನೆ. ಬೆಂಗಳೂರಿನ ಘಟನೆ ನಾವು ಅನಾಗರಿಕರ ಕಾಲಕ್ಕೆ ಸರಿದಿದ್ದೇವೆಯೇ ಎಂಬ ಭಾವನೆ ನನ್ನನ್ನು ಕಾಡುವಂತೆ ಮಾಡಿದೆ. ನಾವು ಕ್ರೂರ ಮೃಗಗಳಿಗಿಂತಲೂ ಕಡೆಯಾಗಿದ್ದೇವೆ. ನಮಗಿಂತ ಪ್ರಾಣಿಗಳೇ ಎಷ್ಟೋ ವಾಸಿ. ಇದು ನಿಜಕ್ಕೂ ತಲೆತಗ್ಗಿಸುವ ಸಂಗತಿ ಎಂದು ಅಕ್ಷಯ್ ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾನೆ.

ಮನುಷ್ಯರಾಗಿರುವ ನಮಗೆ ಇಂಥ ಘಟನೆಗಳು ತಲೆತಗ್ಗಿಸುವಂತೆ ಮಾಡಿದೆ. ನನ್ನ ನಾಲ್ಕು ವರ್ಷ ಮಗಳೊಂದಿಗೆ ಹೊಸ ವರ್ಷಾಚರಣೆ ಸಂಭ್ರಮದಿಂದ ಹಿಂದಿರುಗಿ ಬಂದೆ. ನನ್ನ ಮ ಳು ಇನ್ನೂ ನನ್ನ ತೋಳಿನಲ್ಲೇ ಇದ್ದಳು. ಆಗ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಯಿತು. ನನ್ನ ರಕ್ತ ಕುದಿಯಿತು ಎಂದು ಬಾಲಿವುಡ್ ನಟ ಹೇಳಿದ್ದಾಣೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪರೋಕ್ಷವಾಗಿ ಟೀಕಿಸಿರುವ ಅಕ್ಕಿ, ಪಾಶ್ಚಿಮಾತ್ಯ ಉಡುಪುಗಳ ಅನುಕರಣೆ ಇಂಥ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಕೆಲವರು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಾರೆ. ಸಮಾಜದಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲವೆಂದ ಮೇಲೆ ಅವರ ಎಂದು ದೂರಿದ್ದಾನೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin