150 ತೊಲ ಚಿನ್ನ ಕದ್ದೊಯ್ದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

gold-biscuits Gold--01

ತಂಜಾವೂರು, ಫೆ.3- ತಮಿಳುನಾಡಿನ ತಂಜಾವೂರು ಬಳಿ ಮನೆಯೊಂದರಿಂದ 150 ತೊಲ (1.5 ಕೆಜಿ) ಚಿನ್ನ, ಬೆಳ್ಳಿ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ಕಲ್ಯಾಣಪುರಣ ಗ್ರಾಮದ ಮನೆ ಒಡತಿ ಸುಮತಿ ರೈ ತಮ್ಮ ಮಗನೊಂದಿಗೆ ಕೊಯಮತ್ತೂರಿಗೆ ಹೋಗಿದ್ದಾಗ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.  ಮನೆಯ ಬೀಗ ಒಡೆದಿರುವುದನ್ನು ಗಮನಿಸಿದ ನೆರೆಹೊರೆ ನಿವಾಸಿಗಳು ಸುಮತಿ ಅವರಿಗೆ ಮಾಹಿತಿ ನೀಡಿದರು. ಅವರು ವಾಪಸ್ಸು ಬಂದು ಪರಿಶೀಲಿಸಿದಾಗ ಮನೆಯಲ್ಲಿದ್ದ 150 ತೊಲ ಚಿನ್ನ ಹಾಗೂ 2 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತಿತರ ವಸ್ತುಗಳು ಕಳುವಾಗಿರುವುದು ಕಂಡುಬಂದಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin