ಗುರು ಸಂಚಾರ ಆಧರಿಸಿದ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

rashi

ಈ ಭೂಮಿಯ ಮೇಲೆ ಮಾನವನಾಗಿ ಹುಟ್ಟಿದ ಮೇಲೆ ಅವರವರÀ ಕರ್ಮಾನುಸಾರ ಹಲವಾರು ವಿವಿಧ ಕಷ್ಟಗಳನ್ನು, ಹಲವು ಗ್ರಹಗಳ ಉಪದ್ರವಗಳನ್ನು ಅನುಭವಿಸಬೇಕಾಗುವುದು. ಈ ರೀತಿ ಅನುಭವಿಸುವಾಗ ನಮ್ಮ ಋಷಿಮುನಿವರ್ಯರು ಗುರುಗ್ರಹದ ಸಂಚಾರ ಗಣನೆಗೆ ತೆಗೆದುಕೊಂಡು ಜಾತಕ ರೀತ್ಯ ದೆಶೆ ಭುಕ್ತಿ, ಅಂತರ ಭುಕ್ತಿ ಗುಣಿಸಿ, ಗ್ರಹಗಳ  ಲತ್ತಾ ಕಾಲ ನೋಡಿ, ಪರಿಹಾರ ಮಾಡಿಕೊಳ್ಳಬೇಕೆಂದು ವಿವರಿಸಿದ್ದಾರೆ.  ಗುರುವು ಪ್ರತಿ ರಾಶಿಯಿಂದ ಇನ್ನೊಂದು ರಾಶಿಗೆ ಬರುವ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಪಾಪ ಪರಿಹಾರ ಮಾಡಿಕೊಳ್ಳಬೇಕು. ಗುರುವು ಕನ್ಯಾರಾಶಿಯಲ್ಲಿ ಸಂಚರಿಸುವಾಗ ಪುಣ್ಯ ನದಿ ಕೃಷ್ಣಾನದಿಯಲ್ಲಿ ಮಿಂದು, ದಾನ-ಧರ್ಮ ಮಾಡಬೇಕು. ಈ ಕಾಲದಲ್ಲಿ ನಮ್ಮ ಪಿತೃಗಳು ಸಹ ಮಿಂದು ಅಲ್ಲಿರುತ್ತಾರೆ. ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮಾಡಬೇಕು.

ಗುರು ಸಂಚಾರದಿಂದ ಅನೇಕ ರಾಶಿಯವರಿಗೆ ಅನುಕೂಲ. ಕನ್ಯಾರಾಶಿಗೆ ಬಂದಿರುವುದರಿಂದ ಅವರಿಗೆ ತುಂಬಾ ಅನುಕೂಲ. ಗುರುವು 5,7,9ನೇ ರಾಶಿ ಅಂದರೆ ಮಕರ, ಮೀನ, ವೃಷಭ ರಾಶಿಯವರಿಗೆ ಅನುಕೂಲ. ಧನುಸ್ಸು ರಾಶಿಯವರಿಗೆ ಕೇಂದ್ರಕ್ಕೆ ಬರುತ್ತಾನೆ. ವೃಶ್ಚಿಕ ರಾಶಿಯವರಿಗೆ ಲಾಭ ಸ್ಥಾನ, ಮಿಥುನ ರಾಶಿಯವರಿಗೆ ಸುಖ ಸ್ಥಾನ, ಸಿಂಹ ರಾಶಿಯವರಿಗೆ ಧನ ಸ್ಥಾನ ಹೀಗೆ ಅನೇಕ ರಾಶಿಯವರಿಗೆ ಶುಭಗ್ರಹವಾದ ಗುರುವು ಅನುಕೂಲ ಮಾಡುತ್ತಾನೆ.  ಅದನ್ನೇ ನಾವು ಗುರುಬಲ ಬಂದಿದೆ ಎನ್ನುತ್ತೇವೆ. ಮನೆ ಕಟ್ಟುವುದು, ವಿವಾಹ, ನ್ಯಾಯಾಲಯದ ಮೊಕದ್ದಮೆ ಬರಬೇಕಾದ ಹಣ ಮತ್ತು ಅನೇಕ ಇಷ್ಟಾರ್ಥ ಸಿದ್ಧಿಗಳು ನೆರವೇರುವುವು.

ಮೇಷ
ಗುರುವು 6ನೇ ರಾಶಿಯಲ್ಲಿ ಸಂಚರಿಸುವನು. ನಿಮ್ಮ ಆರೋಗ್ಯವು ಸುಧಾರಿಸುವುದು. ಆದರೂ ರೋಗಭಯ ಕಾಡುವುದು. ಸಂಪಾದನೆ ಪರವಾಗಿಲ್ಲ. ಮಿತ್ರರಲ್ಲಿ ಮನಸ್ತಾಪ ವ್ಯವಹಾರದಲ್ಲಿ ಅಡಚಣೆ, ಅಧಿಕ ಖರ್ಚು.

ವೃಷಭ
ಗುರುವು 5ನೇ ರಾಶಿಯಲ್ಲಿ ಸಂಚರಿಸುವನು. ನಿಮ್ಮ ಆರೋಗ್ಯ ಚೆನ್ನಾಗಿದ್ದು, ಧನಲಾಭ. ಎಲ್ಲಾ ಕಡೆಯಿಂದ ನಿಮಗೆ ಬರಬೇಕಾದ ಹಣವೆಲ್ಲ ಬಂದು, ಧನ ಶೇಖರಿಸುವ ಕಾಲ. ಕುಟುಂಬದಲ್ಲಿ ವಿವಾಹ-ಮಂಗಳ ಕಾರ್ಯ ಜರುಗಿ ಮನೆ ಕಟ್ಟುವುದಕ್ಕೆ ಸಕಾಲ. ವಿದೇಶ ಪ್ರಯಾಣವಿದ್ದು, ಎಲ್ಲಾ ಶುಭ.
ಮಿಥುನ
ಗುರುವು 4ನೇ ರಾಶಿಯಲ್ಲಿ ಸಂಚರಿಸುವನು. ಗುರು ಕೇಂದ್ರಕ್ಕೆ ಬಂದಿರುವುದರಿಂದ ಶುಭ ಫಲಗಳೇ ಹೆಚ್ಚು. ಮನಸ್ಸಿಗೆ ಸಂತೋಷ, ಮಿತ್ರರ ಜೊತೆ ಮನಸ್ತಾಪ, ಕೆಲಸ-ಕಾರ್ಯ ಸುಗಮ. ಅಧಿಕ ಖರ್ಚು. ಕುಟುಂಬದಲ್ಲಿ ಹಿತಕರವಾದ ವಾತಾವರಣವಿರುವುದು.
ಕಟಕ
ಗುರುವು 3ನೇ ರಾಶಿಯಲ್ಲಿ ಸಂಚರಿಸುವನು. ಸ್ವಲ್ಪ ಆರೋಗ್ಯವು ಸರಿ ಇರದೆ ಮನಸ್ಸಿಗೆ ಕಿರಿಕಿರಿ. ಸತ್ಕರ್ಮಾಸಕ್ತಿ. ಮಿತ್ರರ ಜೊತೆ ವಾದಗಳು. ಹಣದ ಅಡಚಣೆ, ಬಂಧು-ಮಿತ್ರರ ಜೊತೆ ಅಪಮಾನ, ವೃಥಾ ಕಲಹ.
ಸಿಂಹ
ಗುರುವು 2ನೇ ರಾಶಿಯಲ್ಲಿ ಸಂಚರಿಸುವನು. ನಿಮಗೆ ಧನ ಸ್ಥಾನಕ್ಕೆ ಗುರುವು ಬಂದಿರುವುದರಿಂದ ಹಣದ ಲಾಭ. ಪುಣ್ಯಕ್ಷೇತ್ರ ದರ್ಶನ. ಶುಭ ಕಾರ್ಯ ನೆರವೇರುವುದು. ಕುಟುಂಬದಲ್ಲಿ ವಿವಾಹ ಇತ್ಯಾದಿ ಮಂಗಳ ಕಾರ್ಯಗಳು ಜರುಗುವುದು.
ಕನ್ಯಾ
ಗುರು ನಿಮ್ಮ ರಾಶಿಯಲ್ಲಿ ಸಂಚರಿಸುವನು. ಒಳ್ಳೆಯ ಗುರುಬಲ. ಮಿಶ್ರ ಫಲ ಕಂಡುಬರುವುದು. ಮಿತ್ರರಿಂದ ವಂಚನೆ, ಅಧಿಕ ತಿರುಗಾಟ, ಬಂಧು ವಿರೋದ, ಹಣದ ಖರ್ಚು, ಉದ್ಯೋಗ-ವ್ಯವಹಾರದಲ್ಲಿ ಅಲ್ಪಲಾಭ, ಕೆಲಸ-ಕಾರ್ಯ ಸುಗಮ. ಕುಟುಂಬದಲ್ಲಿ ನೆಮ್ಮದಿ, ಆರೋಗ್ಯ ಸುಧಾರಣೆ.
ತುಲಾ
ಗುರುವು 12ನೇ ರಾಶಿಯಲ್ಲಿ ಸಂಚರಿಸುವನು. ನಿಮ್ಮ ಆರೋಗ್ಯ ಸ್ವಲ್ಪ ಸರಿ ಇರದೆ ವ್ಯವಹಾರ-ಉದ್ಯೋಗದಲ್ಲಿ ಅಲ್ಪ ಪ್ರಗತಿ. ಅಧಿಕ ಹಣ ಖರ್ಚು. ಸರ್ಕಾರಿ ಕೆಲಸ-ಕಾರ್ಯಗಳಲ್ಲಿ ಅಡಚಣೆ, ದುಷ್ಟ ಜನರ ಸಹವಾಸ. ಎಚ್ಚರವಿರಲಿ.
ವೃಶ್ಚಿಕ
ಗುರು 11ನೇ ರಾಶಿಯಲ್ಲಿ ಸಂಚರಿಸುವನು. ನಿಮ್ಮ ರಾಶಿಗೆ ಧನಲಾಭ, ಎಲ್ಲಾ ಲಾಭ. ಆರೋಗ್ಯ ಸುಧಾರಣೆ. ಕುಟುಂಬದಲ್ಲಿ ಸುಖ ವಿವಾಹ, ಗೃಹ ಪ್ರವೇಶ ಇತ್ಯಾದಿ ಮಂಗಳಕಾರ್ಯ ನೆರವೇರುವುದು. ಬಂಧುಗಳು ಶುಭ ಕಾರ್ಯದಲ್ಲಿ ಭಾಗವಹಿಸಿ ಸಂತೋಷ ಕೊಡುವುದು. ವಾಹನ ಖರೀದಿ.
ಅನೂರಾಧ ನಕ್ಷತ್ರ, ಜ್ಯೇಷ್ಠ ನಕ್ಷತ್ರದವರು ಪ್ರತಿ ಗುರುವಾರ ಕಡಲೆಕಾಳು ಇಟ್ಟು ಪೂಜಿಸಿ, ನವಗ್ರಹ ಸುತ್ತಿ, ವಿಷ್ಣು ಸಹಸ್ರನಾಮ ಪಠಿಸಿರಿ.
ಧನುಸ್ಸು 
ಗುರುವು 10ನೇ ರಾಶಿಯಲ್ಲಿ ಸಂಚರಿಸುವನು. ಗುರುವು ಕೇಂದ್ರ ಸ್ಥಾನಕ್ಕೆ ಬಂದಿರುವುದರಿಂದ ಕೆಲಸ-ಕಾರ್ಯಗಳಲ್ಲಿ ಪ್ರಗತಿ. ವಿದೇಶ ಪ್ರಯಾಣ, ಕುಟುಂಬ ಸುಖ, ವ್ಯಾಪಾರ, ಉದ್ಯೋಗಗಳಲ್ಲಿ ಜಯ, ಅಭಿವೃದ್ಧಿ, ಸರ್ಕಾರಿ ಕ್ಷೇತ್ರದ ಕೆಲಸಗಳು ಸುಗಮ.
ಮೂಲಾ ನಕ್ಷತ್ರದವರು ಧನುರ್ಮಾಸದಲ್ಲಿ ಕಡಲೆಕಾಳು ಇಟ್ಟು ಪೂಜಿಸಿ. ನವಗ್ರಹ ಸುತ್ತಿರಿ. ವಿಷ್ಣು ಸಹಸ್ರನಾಮ ಪಠಿಸಿರಿ.
ಮಕರ
ಗುರುವು 9ನೇ ರಾಶಿಯಲ್ಲಿ ಸಂಚರಿಸುವನು. ಭಾಗ್ಯದ ಮನೆಯಲ್ಲಿ ಸಂಚರಿಸುವುದರಿಂದ ಭಾಗ್ಯ ಹೆಚ್ಚು. ವ್ಯಾಪಾರ, ಉದ್ಯೋಗದಿಂದ ಅಧಿಕ ಲಾಭ. ಮನಸ್ಸಿಗೆ ಉಲ್ಲಾಸ, ಕಾರ್ಯ ಸಾಧನೆಗಾಗಿ ತಿರುಗಾಟ, ಕುಟುಂಬದಲ್ಲಿ ಸುಖ.
 ಕುಂಭ
ಗುರುವು 7ನೇ ರಾಶಿಯಲ್ಲಿ ಸಂಚರಿಸುವನು. ಮನಸ್ಸಿಗೆ ಸ್ವಲ್ಪ ವ್ಯಾಕುಲ. ನಾನಾ ರೀತಿ ಚಿಂತೆ. ಸರ್ಕಾರದ ಕೆಲಸ-ಕಾರ್ಯಗಳಲ್ಲಿ ವಿಘ್ನ. ವಿರೋಧಿ ವೈರಿಗಳಿಂದ ತೊಂದರೆ. ವ್ಯಾಪಾರ, ಉದ್ಯೋಗಗಳಿಂದ ಸಾಧಾರಣ ಲಾಭ. ಆರೋಗ್ಯ ಸ್ವಲ್ಪ ಸುಧಾರಿಸುವುದು.
ಮೀನ
ಗುರುವು 8ನೇ ರಾಶಿಯಲ್ಲಿ ಸಂಚರಿಸುವನು. ಒಳ್ಳೆಯ ಗುರುಬಲ ಬಂದಿದೆ. ಕುಟುಂಬದಲ್ಲಿ ಸುಖ-ಸಂತೋಷ. ಮನೆಯಲ್ಲಿ ವಿವಾಹ ಜರುಗುವುದು. ಗೃಹ ಪ್ರವೇಶ, ನಿವೇಶನ ಖರೀದಿಗೆ ಸಕಾಲ. ಬಂಧು-ಮಿತ್ರರ ಸುಖ. ವಿದೇಶ ಪ್ರಯಾಣ. ಹಣಲಾಭ. ಶುಭ ಫಲಗಳು ಜರುಗುವುವು.

Facebook Comments

Sri Raghav

Admin