ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ : 22ರಂದು ಸಿಎಂ ಸಿದ್ದು ದೆಹಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

 

Siddaramaihaಬೆಂಗಳೂರು, ಆ.18- ವಿಧಾನ ಪರಿಷತ್ಗೆ ಮೂವರು ಸದಸ್ಯರ ನೇಮಕ, ನಿಗಮ- ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧ ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 22ರಂದು ನವದೆಹಲಿಗೆ ತೆರಳಲಿದ್ದಾರೆ.   ಹಾಲಿ ಇರುವ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳ ಲಿದ್ದು, ಉಳಿದ ಅವಧಿಗೆ ಹೊಸ ಬರನ್ನು ನೇಮಕ ಮಾಡುವ ಸಂಬಂಧ ವರಿಷ್ಠರ ಜತೆ ಚರ್ಚಿಸಲಿದ್ದಾರೆ.   ಈಗಾಗಲೇ 85ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಲು ಶಾಸಕರಿಗೆ ಮತ್ತು ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಹಂತದಲ್ಲಿ ಸೋತವರಿಗೆ, ಅವಕಾಶ ವಂಚಿತರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೊಂದಿಗೆ ಮಾತುಕತೆ ಕೂಡ ನಡೆಸಿ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ನಿಗಮ-ಮಂಡಳಿಗಳ ನೇಮಕದಲ್ಲಿ 20ಕ್ಕೂ ಹೆಚ್ಚು ಶಾಸಕರಿಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಲಾಗಿದೆ.  ಕಳೆದ ಬಾರಿ ಟಿಕೆಟ್ ನೀಡಿದವರಿಗೆ ಹಾಗೂ ಶಾಸಕರಾದವರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಬಾರದೆಂದು ಹೈಕಮಾಂಡ್ ವರಿಷ್ಠರು ತೀರ್ಮಾನಿಸಿದರೆ, ಎಲ್ಲ ನಿಗಮ-ಮಂಡಳಿಗಳು ಕಾರ್ಯಕರ್ತರಿಗೆ ದೊರೆಯಲಿವೆ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ ಅವಕಾಶ ನೀಡಬೇಕು, ಸಂಪುಟ ಪುನಾರಚನೆ ಸಂದರ್ಭದಲ್ಲಿ ವಂಚಿತರಾದವರಿಗೆ ಅವಕಾಶ ಕಲ್ಪಿಸಿಕೊಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿರುವ ಹಿನ್ನೆಲೆಯಲ್ಲಿ ಪ್ರಮುಖ ನಿಗಮ-ಮಂಡಳಿಗಳು ಶಾಸಕರ ಪಾಲಾಗುವ ಸಾಧ್ಯತೆ ಇದೆ.

ಈ ಸಂಬಂಧ 22ರಂದು ದೆಹಲಿಯಲ್ಲಿ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಮೇಲ್ಮನೆಯಲ್ಲಿ ಖಾಲಿ ಇರುವ ಮೂವರು ನಾಮಕರಣ ಸದಸ್ಯರ ನೇಮಕ ಸಂಬಂಧವೂ ಕೂಡ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ.   ಈಗಾಗಲೇ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಿ.ಸಿ.ಚಂದ್ರಶೇಖರ್, ಮಾಜಿ ಮೇಯರ್ ಪಿ.ಆರ್.ರಮೇಶ್, ಸಿ.ಎಂ.ಲಿಂಗಪ್ಪ, ಕೆ.ಪಿ.ನಂಜುಂಡಿ, ಮಾಜಿ ಸಂಸದ ಚಂದ್ರಶೇಖರ್ ಮೂರ್ತಿಯವರ ಪತ್ನಿ ಉಮಾದೇವಿ ಸೇರಿದಂತೆ 15 ಜನರ ಹೆಸರು ಕೇಳಿಬಂದಿವೆ.  ಹೈಕಮಾಂಡ್ ಯಾರ ಹೆಸರನ್ನು ಅಂತಿಮಗೊಳಿಸುತ್ತದೆಯೋ ಕಾದು ನೋಡಬೇಕು. ಒಟ್ಟಾರೆ ತಿಂಗಳಾಂತ್ಯದಲ್ಲಿ ನಿಗಮ-ಮಂಡಳಿಗಳಿಗೆ ಹೊಸಬರ ನೇಮಕ, ಮೇಲ್ಮನೆಗೆ ಮೂವರು ನಾಮಕರಣ ಸದಸ್ಯರ ನೇಮಕ ಮಾಡುವ ಸಾಧ್ಯತೆ ಇದೆ.

► Follow us on –  Facebook / Twitter  / Google+

 

Facebook Comments

Sri Raghav

Admin

One thought on “ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ : 22ರಂದು ಸಿಎಂ ಸಿದ್ದು ದೆಹಲಿಗೆ

Comments are closed.