ಪೌಲ್ಟ್ರಿಫಾರಂಗೆ ಕಾಡುಪ್ರಾಣಿಗಳ ದಾಳಿ : ಲಕ್ಷಾಂತರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ಗುಬ್ಬಿ,ಆ.18-ಕಳೆದ ರಾತ್ರಿ ತಾಲ್ಲೂಕಿನ ಚೆನ್ನಶೆಟ್ಟಿಹಳ್ಳಿ ಗ್ರಾಮದ ಹೊರವಲಯದ ತೋಟವೊಂದರ ಪೌಲ್ಟ್ರಿಫಾರಂಗೆ ಕಾಡು ಪ್ರಾಣಿಗಳು ನುಗ್ಗಿ ಸಾವಿರಕ್ಕೂ ಅಧಿಕ ನಾಟಿಕೋಳಿಗಳನ್ನು ಕೊಂದು ಹಾಕಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.ಚೆನ್ನಶೆಟ್ಟಿಹಳ್ಳಿ ಗ್ರಾಮದ ರೈತ ಕುಮಾರ್ ಕೃಷಿ ಜೊತೆಗೆ ಕೋಳಿ ಸಾಕಾಣಿಕೆಯನ್ನು ಉಪಕಸುಬಾಗಿ ಮಾಡಿಕೊಂಡಿದ್ದು, ಕಳೆದ 5 ತಿಂಗಳ ಹಿಂದೆ ನಾಟಿಕೋಳಿಗಳ ಮರಿಗಳನ್ನು ತಂದು ಪೌಲ್ಟ್ರಿಫಾರಂನಲ್ಲಿ ಸಾಕಿದ್ದರು. ನಿನ್ನೆ ರಾತ್ರಿ ಪೌಲ್ಟ್ರಿಗೆ ದಾಳಿ ಇಟ್ಟಿರುವ ಕಾಡುಪ್ರಾಣಿಗಳು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿವೆ.

ಸಾವನ್ನಪ್ಪಿರುವ ಪ್ರತಿ ಕೋಳಿಯೂ ಅರ್ಧ-ಮುಕ್ಕಾಲು ಕೆಜಿ ತೂಗುತ್ತಿದ್ದವು. ಪ್ರತಿಯೊಂದು ಕೋಳಿಯ ಬೆಲೆ 150 ರೂ ಇದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ರಾತ್ರಿ ಕಾಡು ಪ್ರಾಣಿಗಳು ಕೋಳಿ ಫಾರಂಗೆ ದಾಳಿ ಮಾಡಿ ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ತಿಂದು ಹಾಕಿವೆ. ಸಾಯಿಸಿದೆ ಇದರಿಂದ ತೀವ್ರತರ ನಷ್ಟವಾಗಿದ್ದು ದಿಕ್ಕು ತೋಚದಂತಾಗಿದೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಉಪಸಂರಕ್ಷಣಾಧಿಕಾರಿ ಸಲಾರ್ ಅಹಮದ್, ವನಪಾಲಕರಾದ ಕರಿಯಪ್ಪ, ಈರಣ್ಣ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin