ಮಿರಜ್-ಬಳ್ಳಾರಿ ರೈಲು ಕಳ್ಳತನ ಪ್ರಕರಣ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ಬೆಳಗಾವಿ,ಆ19- ಮಿರಜ್-ಬಳ್ಳಾರಿ ಎಕ್ಸ್ ಪ್ರೆಸ್ ರೈಲು ಗಾಡಿಯಲ್ಲಿ ಆಗಸ್ಟ್ 15ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಕುಂದಗೋಳದ ಮೆಹಮ್ಮದ್ ಅಲಿ (33), ಧಾರವಾಡದ ತಾಲೂಕಿನ ಪುಡಲಕಟ್ಟಿ ಗ್ರಾಮದ ಸಂತೋಷ್ ಪೂಜಾರಿ (22), ಹಾಗೂ ಕೇರಳದ ಕಾಸರಗೋಡಿನ ಟೋನಿ ಜೇಮ್ಸ್ (27) ಬಂಧಿತರು.  ಆರೋಪಿಗಳ ಸುಳಿವು ಪಡಿದು ಕೊಂಡ ಡಿವೈಎಸ್‍ಪಿ ಆರ್.ಕೆ. ಪಾಟೀಲ್ ನೇತೃತ್ವದ ತಂಡ ನಿನ್ನೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.  ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin