ಲೈಂಗಿಕ ಕಿರುಕುಳ : ಡ್ಯಾನ್ಸ್ ಮಾಸ್ಟರ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

rape--case

ಬಳ್ಳಾರಿ,ಆ22- ಡ್ಯಾನ್ಸ್ ಕಲಿಸುವ ನಪದಲ್ಲಿ ಆಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಜಿಲ್ಲೆಯ ತೋರಣಗಲ್ಲು ಪೊಲೀಸರು ಬಂಧಿಸಿದ್ದಾರೆ. ಹನುಮೇಶ್ (32), ಎಂಬುವವನೇ ಬಂಧಿತ ಯುವಕ. ಇತನು ಮೂಲತಃ ಕೊಪ್ಪಳಜಿಲ್ಲೆಯ ಶಿವಪುರದವನಾಗಿದ್ದು ತೋರಣಗಲ್ಲುನಲ್ಲಿ ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿ ಹೆಸರಿನಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ.  ಡ್ಯಾನ್ಸ್ ಕಲಿಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನಲ್ಲದೆ ಅವರ ಪೋಟೋ ವಿಡಿಯೋ ಚಿತ್ರೀಕರಣ ನಡೆಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇದಲ್ಲದೆ ಒಬ್ಬ ಬಾಲಕಿಯನ್ನು ಅಪಹರಿಸಿ ನಂತರ ಬಿಟ್ಟಿದ್ದ ಅವಳ ಚಿತ್ರೀಕರಣ ನಡೆಸಿದ ಬಗ್ಗೆ ಸಹ ಇವನ ವಿರುದ್ಧ ಬಳ್ಳಾರಿಯ ಗಾಂಧಿನಗರ ಬ್ರೂಸ್ ಪೇಟೆ ಹಾಗೂ ತೋರಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತೊರಂಗಲ್ಲು ಪೊಲೀಸರು ಯುವಕರನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin