ವಾಹನದ ಮೇಲೆ ಮರ ಬಿದ್ದು 4 ಯಾತ್ರಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಹಿಸಾರ್ (ಹರ್ಯಾಣ), ಆ.23– ಮರವೊಂದು ವಾಹನದ ಮೇಲೆ ಬಿದ್ದು ನಾಲ್ವರು ಯಾತ್ರಾರ್ಥಿಗಳು ಮೃತಪಟ್ಟು ಇತರ 20 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಅಗ್ರೋಹ-ಅದಂಪುರ್ ರಸ್ತೆಯ ಕೊಹ್ಲಿ ಗ್ರಾಮದ ಬಳಿ ನಡೆದಿದೆ. ಗಾಯಾಳುಗಳನ್ನು ಅದಂಪುರ್ ಸಿವಿಲ್ ಹಾಸ್ಪಿಟಲ್ ಮತ್ತು ಅಗ್ರೋಹ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.  50 ಜನ ಯಾತ್ರಿಗಳಿದ್ದ ಕ್ಯಾಂಟರ್ ವಾಹನವು ಪಂಜಾಬ್ನ ಸಂಗ್ರೂರ್ನಿಂದ ರಾಜಸ್ತಾನದ ಧಾರ್ಮಿಕ ಪ್ರಾಮುಖ್ಯತೆಯ ಕ್ಷೇತ್ರವಾದ ಗೋಗಾಮೆರಿಗೆ ತೆರಳುತ್ತಿದ್ದಾಗ ಭಾರೀ ಮರವೊಂದು ವಾಹನದ ಮೇಲೆ ಬಿದ್ದು ಈತ ದುರಂತ ಸಂಭವಿಸಿತು. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಅಸುನೀಗಿ, ಇತರ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin