31 ಗಂಟೆ ನಾನ್ ಸ್ಟಾಪ್ ಡ್ರಮ್ ಬಾರಿಸಿ ವಿಶ್ವದಾಖಲೆ ಮಾಡಿದ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Sriti

ಇಂದೋರ್, ಆ.24-ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ಪುಟ್ಟ ಗ್ರಾಮ ಪಡ್ಲಾದ ಯುವತಿ ಸೃಷ್ಟಿ ಪಟಿದರ್ 31 ಗಂಟೆಗಳ ಕಾಲ ನಿರಂತರ ಡ್ರಮ್ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಸೃಷ್ಟಿ ಸತತ 31 ಗಂಟೆಗಳ ಕಾಲ ಡ್ರಮ್ ಬಾರಿಸಿ, ಅಮೆರಿಕದ ಯುವತಿಯ ಹೆಸರಿನಲ್ಲಿದ್ದ 24 ಗಂಟೆಗಳ ದಾಖಲೆಯನ್ನು ಮುರಿದಿದ್ದಾಳೆ. ಇಂದೋರ್ನಲ್ಲಿ ಆ.22 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಿರಂತರ 31 ಗಂಟೆಗಳ ಕಾಲ ಡ್ರಮ್ ಬಾರಿಸಿ ಹೊಸ ವಿಶ್ವದಾಖಲೆ ಸೃಷ್ಟಿಸಿದಳು.  ಖ್ಯಾತ ಡ್ರಮ್ ವಾದಕ ಬಬ್ಲೂ ಶರ್ಮಾ ಅವರಿಂದ ಈ ಪಾಶ್ಚಾತ್ಯ ವಾದ್ಯ ಬಾರಿಸುವುದನ್ನು ಕರಗತ ಮಾಡಿಕೊಂಡ ಸೃಷ್ಟಿ ಈಗ ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin