ಅಕ್ರಮವಾಗಿ ತಯಾರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಗುಟ್ಕಾ ಪ್ಯಾಕೆಟ್ ವಶ : ನಾಲ್ವರ ಬಂಧನ
ಕಲಘಟಗಿ,ಆ27- ಮಿಂಚಿನ ಕಾರ್ಯ್ರಾಚರಣೆ ನಡೆಸಿದ ಪೊಲೀಸರು ಹೊಲವೊಂದರ ಶೆಡ್ನಲ್ಲಿ ಅಕ್ರಮವಾಗಿ ಗುಟ್ಕಾ ತಯಾರಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರು ಅಕ್ರಮ ದಂಧೆ ಕೋರರನ್ನು ಬಂಧಿಸಿ ಲಕ್ಷಾಂತರರೂ ಮೌಲ್ಯದ ಮಷಿನ್ ಗುಟ್ಕಾ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಸಂಗದೇವರ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲಕ ಶಿವಪ್ಪ ಮುಧೋಳ ಎಂಬುವವರ ಹೊಲದಲ್ಲಿ ಪಾನ್ರಾಜ್ ಎಂಬ ಹೆಸರಿನಲ್ಲಿ ಗುಟ್ಕಾ ಪ್ಯಾಕೇಟ್ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲರೂ ಹೊರ ರಾಜ್ಯದವರು ಎಂದು ತಿಳಿದುಬಂದಿದೆ. ಪೊಲೀಸರು ಹೊಲದ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಪಿಎಸ್ಐ ಪರಮೇಶ್ವರ್ ಕವಟಗಿ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
► Follow us on – Facebook / Twitter / Google+
Facebook Comments