ಅಪರಿಚಿತ ಮಹಿಳೆ  ಬರ್ಬರ  ಕೊಲೆ 

ಈ ಸುದ್ದಿಯನ್ನು ಶೇರ್ ಮಾಡಿ

murder

ಬೇಲೂರು,ಆ.31-ಅಪರಿಚಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಹಗರೆ ಹಳೇಬೀಡು ರಸ್ತೆಯ ನೀರಾವರಿ ಇಲಾಖೆ ಸಮೀಪ ಎಸೆದು ಹೋಗಿರುವ ಘಟನೆ ಹಳೇಬೀಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಹಾಗೂ ಅರಸೀಕೆರೆ ಡಿವೈಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಹಗರೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿರುವ ನೀರಾವರಿ ಇಲಾಖೆ ಕಚೇರಿ ಬಳಿ ಜೋಳದ ಹೊಲಗಳಿಗೆ ತೆರಳುವ ಕಾಲುದಾರಿಯಲ್ಲಿ ಶವ ಪತ್ತೆಯಾಗಿದ್ದು, ದಾರಿಹೋಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.ದುಷ್ಕರ್ಮಿಗಳು ಮಹಿಳೆಯ ಕೊರಳಿಗೆ ವೈರ್‍ನಿಂದ ಬಿಗಿದು ಕಲ್ಲಿನಿಂದ ಮುಖ ಜಜ್ಜಿ ಹತ್ಯೆಗೈದಿದ್ದಾರೆ.

ಸ್ಥಳಕ್ಕೆ ಹಳೇಬೀಡು ಪಿಎಸ್‍ಐ ಸುಬ್ಬಯ್ಯ ಹಾಗೂ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಮಹಿಳೆಯ ವಯಸ್ಸು ಸುಮಾರು 45 ಇರಬಹುದು, ಕಪ್ಪು-ಬಿಳಿ ಬಣ್ಣದ, ಉಡುಪು ಧರಿಸಿದ್ದು ವಾರಸುದಾರರ ಪತ್ತೆಗಾಗಿ ಶವವನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂದಿಸಿದಂತೆ ಹಲೇಬೀಡು ಪೊಲೀಸ್ ಠಾಣೆಯಲ್ಲಿ ಮೊಖದ್ದಮೆಯನ್ನು ದಾಖಲಿಸಲಾಗಿದೆ.
ಇಂದು ಎಸ್ಪಿ ರಾಹುಲ್‍ಕುಮಾರ್ ಹಾಗೂ ಅರಸೀಕೆರೆ ಡಿವೈಎಸ್ಪಿ ಭೇಟಿ ನೀಡಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin