ಸಕ್ಕರೆ ತುಂಬಿದ್ದ ಲಾರಿಯನ್ನೇ ಕದ್ದೊಯ್ದ ಕಳವು

ಈ ಸುದ್ದಿಯನ್ನು ಶೇರ್ ಮಾಡಿ
Lorry
ಸಾಂಧರ್ಭಿಕ ಚಿತ್ರ

ಬೆಳಗಾವಿ, ಆ.31- ಸಕ್ಕರೆ ತುಂಬಿದ ಲಾರಿಯನ್ನು ಅಪಹರಿಸಿರುವ ಘಟನೆ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.ನಿನ್ನೆ ರಾತ್ರಿ ಕಾನ್ಪೇಟೆ ಸಕ್ಕರೆ ಕಾರ್ಖಾನೆಯಿಂದ ಸರಕು ತುಂಬಿಕೊಂಡು ರಾಮದುರ್ಗಕ್ಕೆ ಬಂದಿದ್ದ ಲಾರಿ ಚಾಲಕ ವಿಶ್ರಾಂತಿಗೆಂದು ಥೇರ್ ಬಜಾರ್ ಬಳಿ ವಾಹನ ನಿಲ್ಲಿಸಿ ಊಟಕ್ಕೆ ತೆರಳಿದ್ದ. ಅರ್ಧ ಗಂಟೆ ಬಿಟ್ಟು ಅಲ್ಲಿಗೆ ಬಂದಾಗ ಲಾರಿಯೇ ಕಾಣಲಿಲ್ಲ. ಗಾಬರಿಗೊಂಡ ಆತ ತಕ್ಷಣ ಯಾರೋ ಮೂವರು ವಾಹನವನ್ನು ಓಡಿಸಿಕೊಂಡು ಹೋದರು ಎಂದು ತಿಳಿಸಿದ್ದಾರೆ.  ತಕ್ಷಣ ಚಾಲಕ ರಾಮದುರ್ಗ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಕ್ಕರೆ ತರಿಸಿಕೊಂಡಿದ್ದ ಹೋಸೂರು ಮಠ ಎಂಬುವರು ದೂರು ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin