ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣ : ಸಿಐಡಿಯಿಂದ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

MMK

ಬೆಂಗಳೂರು, ಸೆ.1- ಹಿರಿಯ ಸಾಹಿತಿ ಡಾ.ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಸಿಬಿಐ ಅಧಿಕಾರಿ ಎ.ವಿ ಸಿಂಗ್ ಮಾಹಿತಿ ಪಡೆದಿದ್ದಾರೆ. ಹತ್ಯೆಗೆ ಬಳಸಲಾಗಿದ್ದ ಬುಲೆಟ್ಗಳನ್ನು ಸಿಬಿಐ ಪಡೆದು ಪರೀಕ್ಷೆಗಾಗಿ ಅಂತಾರಾಷ್ಟ್ರೀಯ ವಿಧಿ-ವಿeನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಸಾಹಿತಿ ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದು, ವಿಚಾರವಾದಿ ಗೊವಿಂದ ಪನ್ಸಾರೆ ಹಾಗೂ ಸಾಹಿತಿ ದಾಬೋರ್ಲ್ಕ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ನಡುವೆ ಮೂವರ ಹತ್ಯೆಗೂ ಸಾಮ್ಯತೆ ಕಂಡು ಬಂದಿದ್ದು,7.65 ಎಂ.ಎಂ.ದೇಸಿ ನಿರ್ಮಿತ ಒಂದೇ ಮಾದರಿಯ ಪಿಸ್ತೂಲ್ ಬಳಸಿ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಮೂವರು ಆರೋಪಿಗಳಿಂದ ಮೂವರು ಸಾಹಿತಿಗಳ ಹತ್ಯೆ ನಡೆಸಲಾಗಿದ್ದು, ಮೂವರು ಆರೋಪಿಗಳಿಗೆ ಸನಾತನ ಸಂಸ್ಥೆಯ ನಂಟು ಇದೆ ಎನ್ನಲಾಗುತ್ತಿದೆ. ಮೂವರು ಸಹ ನೇಪಾಳದಲ್ಲಿ ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೂವರ ಹತ್ಯೆಯಲ್ಲೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ಬೆಂಗಳೂರಿನ ವಾಸ್ತವ್ಯ ಹೂಡಿದ್ದು, ಸಿಐಡಿಯಿಂದ ಮಾಹಿತಿ ಪಡೆದಿದ್ದಾರೆ. ಈ ನಡುವೆ ಹತ್ಯೆಗೆ ಬಳಸಿರುವ ಬುಲೆಟ್ ಗಳನ್ನು ಪಡೆದು ಪರೀಕ್ಷೆಗಾಗಿ ಸ್ಕಾಟ್ ಲ್ಯಾಂಡ್ ಯಾರ್ಡ್ ಗೆ ಕಳುಹಿಸಿಕೊಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin