ಎತ್ತಿನ ಬಂಡಿ ಚಕ್ರಕ್ಕೆ ಸಿಕ್ಕು ಗಾಯಗೊಂಡಿದ್ದ ರಾಮಣ್ಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bandi

ವಿಜಯಪುರ,ಸೆ1- ಬಂಡಿ ಓಟದಲ್ಲಿ ಚಕ್ರಕ್ಕೆ ಸಿಕ್ಕು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿರುವ ಘಟನೆ ನಗರದ ಸಾರವಾಡ ಗ್ರಾಮದಲ್ಲಿ ನಡೆದಿದೆ. ರಾಮಣ್ಣ ಹೆಗಡಿ (48) ಎಂಬುವವನೇ ಸಾವಿಗೀಡಾದ ವ್ಯಕ್ತಿಯಾಗಿದ್ದಾನೆ. ಇತನು ಕಳೆದ ತಿಂಗಳ 27ರಂದು ನಡೆದಿದ್ದ ವಿಜಯಪುರದ ಸಾರವಾಡ ಗ್ರಾಮದಲ್ಲಿ ಎತ್ತಿನ ಬಂಡಿ ಓಟದ ಸ್ಫರ್ಧೆಯಲ್ಲಿ ಭಾಗವಹಿಸಿದ್ದ. ಎತ್ತಿನ ಬಂಡಿಗಳು ಆತನ ಮೇಲೆ ಹಾಯ್ದು ಹೋಗಿ ಗಂಭೀರವಾಗಿ ಗಾಯಗೊಂಡಿದ್ದನು. ಇತನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಆತನು ಮೃತ ಪಟ್ಟಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin