ತುಮಕೂರಿಗೆ ಹರಿಯುತ್ತಿದ್ದಾಳೆ ಹೇಮಾ

ಈ ಸುದ್ದಿಯನ್ನು ಶೇರ್ ಮಾಡಿ

hemavati--water

ತುಮಕೂರು,ಸೆ.1-ಜಿಲ್ಲೆಗೆ ಕುಡಿಯುವ ನೀರು ಅಭಾವ ತಪ್ಪಿಸಲು ಕಳೆದ ಆ.13ರಂದು ಜಿಲ್ಲೆಗೆ ಹೇಮಾವತಿಯಿಂದ ಅಗತ್ಯ ನೀರು ಹರಿಸಲಾಗುವುದು ಎಂದು ಮಾಜಿ ಸಚಿವ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ಆಧುನೀಕರಣಗೊಂಡ ನಾಲೆಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.12ರಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ತುಮಕೂರು ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗೆ 7 ಟಿಎಂಸಿ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗಾಗಿ ಆ.13ರಿಂದ ತುಮಕೂರಿಗೆ ನೀರು ಬಿಡಲಾಗಿದೆ ಎಂದು ಹೇಳಿದರು.

ಜಿಲ್ಲೆಗೆ ಇದುವರೆಗೂ 2.63 ಟಿಎಂಸಿ ಹೇಮಾವತಿ ನೀರು ಹರಿದಿದೆ. ಕಳಸಾಚಂದ್ ಗ್ರಾಮದ ಬಳಿ ಆರಂಭವಾಗುವ ಹೊಸ ನಾಲೆಗೆ ಆ.13ರಿಂದ ಕುಡಿಯುವ ನೀರು ಬಿಡಲಾಗಿದ್ದು , ಸದ್ಯ 1800 ಕ್ಯೂಸೆಕ್ ನೀರು ತುಮಕೂರು ನಾಲೆಯಲ್ಲಿ ಹರಿಯುತ್ತಿದ್ದು ಇದೇ ಸಾಮಥ್ರ್ಯದಲ್ಲಿ ನೀರು ಹರಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಗೆ 7 ಟಿಎಂಸಿ ನೀರು ಬರಲಿದೆ ಎಂದರು. ಬಿಎನ್‍ಟಿ ನಾಲೆಗೂ ಹಾಗೂ ಸಾಹುಕಾರ ಚನ್ನಯ್ಯ ನಾಲೆಗೂ ನೀರು ಹರಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗಿಂದ ನಾಲೆಯನ್ನು ನಿರ್ಮಿಸಿದ್ದು ,ತುಮಕೂರಿನ ಕಡೆಗೆ ಇರುವ ನಾಲೆ ಒಡೆಯುವ ಪ್ರಮೇಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಪಿ.ಮಹೇಶ್ ಹಾಗೂ ರಾಜು, ಕೃಷ್ಣಮೂರ್ತಿ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin