ನಾಳೆ ಮತ್ತೆ ಬಂದ್ ಬಿಸಿ : ಸ್ಥಬ್ದಗೊಳ್ಳಲಿದೆ ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ

Bandh

ಬೆಂಗಳೂರು,ಸೆ.1-ಮಹದಾಯಿ ಹೋರಾಟದ ಸಂದರ್ಭದಲ್ಲಿ ಎರಡು ಬಾರಿ ರಾಜ್ಯ ಬಂದ್ ಬಿಸಿ ಅನುಭವಿಸಿದ್ದ ಜನತೆಗೆ ನಾಳೆ ಮತ್ತೆ ಮುಷ್ಕರದ ಬಿಸಿ ಎದುರಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಕಾರ್ಮಿಕ ಸಂಘಟನೆಗಳು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಸಂಚಾರ ಸ್ಥಗಿತಗೊಳ್ಳಲಿದೆ.   ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಮರಣ ಶಾಸನವಾಗಲಿರುವ ಮತ್ತು ಚಾಲಕ ವೃತ್ತಿಗೆ ಮಾರಕವಾಗಲಿರುವ ರಸ್ತೆ ಸುರಕ್ಷ ಮಸೂದೆ 2016ರನ್ನು ವಿರೋಧಿಸಿ ಅಖಿಲ ಭಾರತ ಸಾರಿಗೆ ಮುಷ್ಕರವನ್ನು ಕೈಗೊಂಡಿರುವುದರಿಂದ ಬಹುತೇಕ ಎಲ್ಲ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದು, ನಾಳೆ ಸಾರ್ವಜನಿಕರು ಮತ್ತೊಂದು ಸಂಕಷ್ಟ ಎದುರಿಸಬೇಕಾಗಿದೆ.

ಹೊಸ ಕಾಯ್ದೆ ಪ್ರಕಾರ ಪ್ರಯಾಣಿಕ ಸಾರಿಗೆಯನ್ನು ಹರಾಜು ಮೂಲಕ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿದರೆ ಈಗಿರುವ ಪ್ರಯಾಣ ದರಕ್ಕಿಂತ ಮೂರ್ನಾಿಲ್ಕು ಪಟ್ಟು ದರವನ್ನು ಹೆಚ್ಚಿಸಿ ಸಾರ್ವಜನಿಕರ ಮೇಲೆ ಬರೆ ಎಳೆಯಲಾಗುತ್ತದೆ. ಪ್ರಯಾಣಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ರಾಷ್ಟ್ರೀಕರಣಗೊಳಿಸಿ ಅತ್ಯಂತ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುವ ಬದಲು ದುಬಾರಿ ವೆಚ್ಚಕ್ಕೆ ದೂಡಿ ಸಾರ್ವಜನಿಕರನ್ನು ಬಲಿಪಶು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಇಳಿದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ.
ಜೀವನೋಪಾಯಕ್ಕಾಗಿ ಚಾಲಕ ವೃತ್ತಿಯನ್ನು ಅವಲಂಬಿಸಿ ಹಗರಲಿರುಳು ದುಡಿಯುತ್ತಿರುವವರಿಗೆ ಹೊಸ ಕಾಯ್ದೆ ಪ್ರಕಾರ ಮನಸೋ ಇಚ್ಛೆ ದಂಡ ವಿಧಿಸಲು ಮುಂದಾಗಿರುವುದನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಆಟೋ ಚಾಲಕರ ಸಂಘ, ಬ್ಯಾಂಕ್ ನೌಕರರ ಸಂಘ, ವರ್ತಕರ ಸಂಘಗಳು, ಕೆಲ ವಿದ್ಯಾರ್ಥಿ ಸಂಘಟನೆಗಳು ನಾಳೆ ಬೀದಿಗಿಳಿದು ಪ್ರತಿಭಟನೆ ನಡೆಸಲಿವೆ.  ಲಕ್ಷಾಂತರ ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ರಸ್ತೆಗಿಳಿಯುವುದಿಲ್ಲ. ಇದರಿಂದ ಸರಕು ಸಾಗಾಣಿಕೆಯ ಮೇಲೂ ಪರಿಣಾಮ ಬೀರಲಿದೆ. ಐಟಿಬಿಟಿ ಕ್ಷೇತ್ರದ ಮೇಲೆ ಈ ಮುಷ್ಕರ ತೀವ್ರ ಪರಿಣಾಮ ಬೀರಲಿದೆ. ನಾಳೆ ಬಂದ್ ಹಿನ್ನೆಲೆಯಲ್ಲಿ ರಜೆಯಾದರೆ, ಶನಿವಾರ ರಜೆ, ಭಾನುವಾರ ಸಾಮಾನ್ಯ ರಜೆ, ಸೋಮವಾರ ಹಬ್ಬದ ರಜೆ ಇರುತ್ತದೆ.

ಹಬ್ಬಕ್ಕೆ ತೆರಳುವವರು ನಾಳೆಯಿಂದಲೇ ಹೊರಡಲಿರುವುದರಿಂದ ಮುಷ್ಕರದ ಬಿಸಿ ಹಬ್ಬದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ನಾಳೆ ವಿವಿಧ ಸಾರಿಗೆ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಲಿವೆ.

► Follow us on –  Facebook / Twitter  / Google+

Facebook Comments

Sri Raghav

Admin