ಬೆಂಗಳೂರಲ್ಲಿ ನಿಲ್ಲದ ಸರಗಳ್ಳರ ಹಾವಳಿ : ಮತ್ತೆ ಮೂರು ಕಡೆ ಕೈಚಳಕ

ಈ ಸುದ್ದಿಯನ್ನು ಶೇರ್ ಮಾಡಿ

Snatchers

ಬೆಂಗಳೂರು,ಸೆ.1-ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು , ನಿನ್ನೆ ಬೆಳ್ಳಂಬೆಳಗ್ಗೆ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಮಹಿಳೆಯ ಸರ ಅಪಹರಣ ಹಾಗೂ ವೃದ್ಧೆಯ ಸರ ಅಪಹರಣ ಯತ್ನ ಪ್ರಕರಣದ ಬೆನ್ನಲ್ಲೇ ಸಂಜೆ ಮತ್ತೆ ಮೂರು ಕಡೆ ಮಾಂಗಲ್ಯ ಸರ ಅಪಹರಿಸಿರುವುದು ಮಹಿಳೆಯರಲ್ಲಿ ಆತಂಕವುಂಟು ಮಾಡಿದೆ.

ಚಂದ್ರಲೇಔಟ್ :

ಅನ್ನಪೂರ್ಣ ಎಂಬುವರು 9ನೇ ಕ್ರಾಸ್, 9ನೇ ಬ್ಲಾಕ್ನಲ್ಲಿ ನಿನ್ನೆ ಮಧ್ಯಾಹ್ನ 3.50ರಲ್ಲಿ ನಡೆದು ಹೋಗುತ್ತಿದ್ದಾಗ ಇಬ್ಬರು ಸರಗಳ್ಳರು ಇವರನ್ನು ಹಿಂಬಾಲಿಸಿ 30 ಗ್ರಾಂ ತೂಕದ ಸರ ಎಗರಿಸಿ ಪರಾರಿಯಾಗಿದ್ದಾರೆ.

ವಿಜಯನಗರ:

ಕಾವೇರಿ ಲೇಔಟ್ನ ಮೂರನೇ ಕ್ರಾಸ್ ನಿವಾಸಿ ಶೋಭಾವತಿ ಎಂಬುವರು ನಿನ್ನೆ ಸಂಜೆ 4 ಗಂಟೆಯಲ್ಲಿ ಮನೆ ಮುಂದೆ ಗೇಟ್ ಬಳಿ ನಿಂತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಇವರ 90 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ.

ಜಯನಗರ:

ಜಯನಗರದ 3ನೇ ಕ್ರಾಸ್, 11ನೇ ಮುಖ್ಯರಸ್ತೆಯ ಓರ್ರಾ ಜ್ಯುವೆಲರಿ ಅಂಗಡಿ ಬಳಿ ನಾಗರತ್ನ ಎಂಬುವರು ನಿನ್ನೆ ರಾತ್ರಿ 7.45ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಇವರನ್ನು ಹಿಂಬಾಲಿಸಿದ ಚೋರರು ಸಮಯ ಸಾಧಿಸಿ ಒಂದು ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ.   ಈ ಮೂರು ಪ್ರಕರಣಗಳನ್ನು ಆಯಾ ವ್ಯಾಪ್ತಿಯ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ.  ಪ್ರತಿದಿನ ದ್ವಿಚಕ್ರ ವಾಹನದಲ್ಲಿ ಸರಗಳ್ಳರು ಸುತ್ತಾಡುತ್ತಾ ಒಂಟಿ ಮಹಿಳೆಯರ ಸರ ಅಪಹರಿಸುತ್ತಿರುವುದರಿಂದ ಮಹಿಳಾಮಣಿಗಳು ಭಯದಿಂದಲೇ ಓಡಾಡುವಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin