ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು

ಈ ಸುದ್ದಿಯನ್ನು ಶೇರ್ ಮಾಡಿ

congres--bjp

ಗೌರಿಬಿದನೂರು, ಸೆ.2- ಕೇಂದ್ರದಲ್ಲಿನ ಬಿಜೆಪಿ ಮತ್ತು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಗಳ ನೀತಿ ರೈತರ ಬೆನ್ನಿಗೆ ಚೂರಿ ಹಾಕುತ್ತಿವೆ. ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿಂದ್ದಂತೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಹರಿಹಾಯ್ದರು.ಕರ್ನಾಟಕ ಪ್ರಾಂತ ರೈತ ಸಂಘ ರೈತರ ವಿವಿಧ ಬೇಡಿಕೆಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 70ರ ದಶಕದಿಂದ 1 ರಿಂದ 6 ಎಕರೆವರೆಗೆ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಭೂಮಿಯನ್ನು ವಿತರಿಸುವಂತೆ ಒತಾತಿಯಿಸುತ್ತಿದ್ದಾರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಒತ್ತುವರಿ ಆರೋಪವನ್ನು ಹೊರಿಸುವ ಮೂಲಕ ರೈತರನ್ನು ಜೈಲಿಗಟ್ಟುವ ಹುನ್ನಾರಕ್ಕೆ ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಭೂ ಒತ್ತುವರಿ ಜಾಗ ತೆರವುಗೊಳಿಸಿ ಸಂರಕ್ಷಿಸುವ ಜತೆಗೆ ತಪ್ಪತಸ್ಥರನ್ನು ಶಿಕ್ಷೆಗೆ ಗುರಿಪಡಿಸುವ ಸಲುವಾಗಿ ವಿಶೇಷ ನ್ಯಾಯಾಲಯ ಆಸ್ತಿತ್ವಕ್ಕೆ ತಂದಿದೆ. ಆದರೆ, ರಾಜ್ಯದಲ್ಲಿ 7.55 ಲಕ್ಷ ಎಕರೆ ಪ್ರದೇಶವನ್ನು ಬಡರೈತರು ಉಳುಮೆ ಮಾಡುತ್ತಿದ್ದಾರೆ, ಈ ಜಮೀನನ್ನು ಉಳುವವರಿಗೆ ನೀಡಬೇಕು ಎಂದು ಆಗ್ರಹಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಎನ್.ರಾಜು, ಕಾರ್ಯದರ್ಶಿ ಎನ್.ಆರ್.ರವಿಚಂದ್ರರೆಡ್ಡಿ, ಮುಖಂಡರಾದÀ ಸಿ.ಸಿ.ಅಶ್ವತ್ಥಪ್ಪ, ಮಂಜುನಾಥ್, ಅಂಜಿನಪ್ಪ, ಗಂಗಾಧರಪ್ಪ, ಮಹಮದ್, ಸಾಲಾರ್, ಅಭೀಬುಲ್ಲಾ, ನಾಗರಾಜು, ರವಿಕುಮಾರ್, ಉಗ್ರಪ್ಪ, ಕಿಶೋರ್, ನಾರಾಯಣ್‍ನಾಯಕ್, ಸತ್ಯಪ್ಪ, ವಿಶ್ವನಾಥರೆಡ್ಡಿ ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin