ಕೆಎಸ್‌ಆರ್‌ಟಿಸಿಗೆ ಮೂರು ಪ್ರಶಸ್ತಿ ಗರಿ

ಈ ಸುದ್ದಿಯನ್ನು ಶೇರ್ ಮಾಡಿ

ksrtc

ಬೆಂಗಳೂರು, ಸೆ.2- ಕೆಎಸ್‌ಆರ್‌ಟಿಸಿಯ ‘ಇದು ನನ್ನ ಬಸ್ಸು ಸಾರ್ವಜನಿಕ ಜಾಗೃತಿ ಅಭಿಯಾನ’ಕ್ಕೆ ರಾಷ್ಟ್ರೀಯ ಎಕ್ಸೆಲೆನ್ಸ್ ಇನ್ ಕಾರ್ಪೋರೇಟ್ ಕಮ್ಯುನಿಕೇಷನ್ ಸ್ಟಾಫ್ ಡ್ಯೂಟಿ ರೋಟಾ ಮತ್ತು ರಜೆ ನಿರ್ವಹಣಾ ವ್ಯವಸ್ಥೆಗೆ ಏಷ್ಯಾ ಫೆಸಿಫಿಕ್ ಎಚ್‌ಆರ್ ಮತ್ತು ಸೇವಾ ಕ್ಷೇತ್ರದಲ್ಲಿ ಸುರಕ್ಷತೆಯ ಉಪಕ್ರಮಗಳ ಅನುಷ್ಠಾನಕ್ಕಾಗಿ ಗ್ರೀನ್‌ಟೆಕ್ ಸೇಫ್ಟಿ ಪ್ರಶಸ್ತಿಗಳು ದೊರೆತಿವೆ.
‘ಇದು ನನ್ನ ಬಸ್ಸು ಸಾರ್ವಜನಿಕ ಜಾಗೃತಿ ಅಭಿಯಾನ’ವು ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಪ್ರಯೋಗವಾಗಿತ್ತು.
ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಬಂದ್, ಮುಷ್ಕರ ನಡೆದ ಸಂದರ್ಭಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳು ಮೊದಲ ಗುರಿಯಾಗುತ್ತಿದ್ದು, ಬಸ್ಸುಗಳು ಸಾರ್ವಜನಿಕರ ಆಸ್ತಿ, ಬಸ್ಸುಗಳಿಗೆ ಹಾನಿ ಮಾಡಿದರೆ ಅದು ತಮ್ಮದೇ ನಷ್ಟವೆಂಬ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು ಎಂಬ ಸದುದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿತ್ತು.

ಸಂಸ್ಥೆಯ ಈ ಅಭಿಯಾನವನ್ನು ದೇಶದ ಇತರೆ ರಸ್ತೆ ಸಾರಿಗೆ ಸಂಸ್ಥೆಗಳು ಅನುಷ್ಠಾನಗೊಳಿಸಲು ಆಶಯ ವ್ಯಕ್ತಪಡಿಸಿದ್ದು, ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಹಲವು ರಸ್ತೆ ಸಾರಿಗೆ ಸಂಸ್ಥೆಗಳು ಈ ಮಾದರಿಯ ಅಭಿಯಾನವನ್ನು ರೂಪಿಸಿದ್ದಾರೆ.  ಸಂಸ್ಥೆಯ ಸ್ಟಾಫ್ ಡ್ಯೂಟಿ ರೋಟಾ ಮತ್ತು ರಜೆ ನಿರ್ವಹಣಾ ವ್ಯವಸ್ಥೆಯು ರಸ್ತೆ ಸಾರಿಗೆ ಇತಿಹಾಸದಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿರುತ್ತದೆ. ಟಚ್ ಸ್ಕ್ರೀನ್ ಹೊಂದಿರುವ 247 ಸಿಬ್ಬಂದಿ ಸ್ನೇಹಿ ಕಿಯೋಸ್ಕ್, ಸೇವಾ ಜೇಷ್ಠತೆ ಮತ್ತು ಕೌನ್ಸಿಲಿಂಗ್ ಮೂಲಕ ಸ್ವಯಂ ಡ್ಯೂಟಿ ಹೊಂದಿಸಿಕೊಡುವ, ಪಾರದರ್ಶಕ, ಭ್ರಷ್ಟತೆಗೆ ಅವಕಾಶವಿಲ್ಲದಂತಹ, ನಿಗದಿತ ಸಮಯದಲ್ಲಿ ರಜೆ ಮಂಜೂರಾತಿ, ಎಸ್‌ಎಂಎಸ್ ಮಾಹಿತಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಎರಡು ರಾಷ್ಟ್ರೀಯ ಪ್ರಶಸ್ತಿಯನ್ನು ವಿಶ್ವ ಸಾಮಾಜಿಕ ಹೊಣೆಗಾರಿಕೆ ಸಂಸ್ಥೆಯು ಕೆಎಸ್‌ಆರ್‌ಟಿಸಿಗೆ ನೀಡಿದೆ.

ಸೇವಾ ಕ್ಷೇತ್ರದಲ್ಲಿ ಸುರಕ್ಷತೆಯ ಉಪಕ್ರಮಗಳ ಅನುಷ್ಠಾನಕ್ಕಾಗಿ ಸಾರಿಗೆ ಸಂಸ್ಥೆಗೆ ಗ್ರೀನ್‌ಟೆಕ್ ಸೇಫ್ಟಿ ಪ್ರಶಸ್ತಿ ಲಭಿಸಿದ್ದು , ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಗೋವಾದ ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಪ್ರಶಸ್ತಿ ಪ್ರದಾನ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin