ದೇಶದ ಅಭಿವೃದ್ಧಿಯ ಬೆನ್ನೆಲುಬು-ಆದರ್ಶ ಶಿಕ್ಷಕ

ಈ ಸುದ್ದಿಯನ್ನು ಶೇರ್ ಮಾಡಿ

radhakrishnan

ಒಂದು ದೇಶದ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿದೆ. ದೇಶದ ಮುಂದಿನ ಶ್ರೇಷ್ಠ ನಾಗರಿಕರಾಗುವವರಿಗೆ ಮೌಲ್ಯಯುತ ಶಿಕ್ಷಣ ನೀಡಲು ಉತ್ತಮ ಶಿಕ್ಷಕರ ಅವಶ್ಯಕತೆ ಇದೆ. ಶಿಕ್ಷಕರು ದೇಶದ ಬೆನ್ನೆಲುಬು. ಶಿಕ್ಷಣ-ಶಿಕ್ಷಕ-ಶಿಕ್ಷಣಾರ್ಥಿಗಳ ನಡುವಿನ ಮಧುರ, ವ್ಯವಸ್ಥಿತ, ಕ್ರಮಬದ್ಧ, ಅರ್ಥಗರ್ಭಿತ ಸಂಬಂಧವೇ ದೇಶದ ಪ್ರಗತಿಗೆ ಪೂರಕ ಎಂಬುದನ್ನು ಇಡೀ ಜಗತ್ತಿಗೆ ಮನದಟ್ಟಾಗಿಸಿದ ಮಹಾನ್ ತತ್ವ ಜ್ಞಾನಿ   ಶ್ರೇಷ್ಠ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್.

ವಿದ್ಯಾಶಬ್ದಕ್ಕೆ ಅರಿವು, ತಿಳುವಳಿಕೆ,  ಎಂದರ್ಥ. ಇದನ್ನೇ ಶಿಕ್ಷಣ ಎನ್ನುವುದು. ಡಾ.ಎಸ್.ರಾಧಾಕೃಷ್ಣನ್‍ರವರು Knowledge of the self is Truth, The Highest kind of knowledge ಆತ್ಮ ಸಾಕ್ಷಾತ್ಕಾರವೇ ಅರಿವು. ಮಹಾತ್ಮ ಗಾಂಧೀಜಿಯವರು By Education I mean, The Drawing out of Best in child and Man body. mind and spirit. ಪಂಚಕೋಶಗಳನ್ನೊಳಗೊಂಡ ಶಿಕ್ಷಣ ಅಗತ್ಯವೆಂದು ಹೇಳಿದ್ದಾರೆ.

ಶಿಕ್ಷಕನ ಪ್ರಾಮುಖ್ಯತೆ ಮತ್ತು ಅಸ್ತಿತ್ವವನ್ನು ಎಂದಿಗೂ ಅಲ್ಲಗಳೆಯಲಾಗದು. ಆದ್ದರಿಂದ ಶಿಕ್ಷಕ ಜಗೃತನಾಗಿ ಶಿಕ್ಷಣ ವ್ಯವಸ್ಥೆಯನ್ನೇ ಅರ್ಥಪೂರ್ಣ ಮಾಡಬೇಕಾಗಿದೆ. ಶಿಕ್ಷಕನಾದವನಿಗೆ ಮಗು, ಶಾಲೆ, ಸಮಾಜ, ಪರಿಸರಗಳ ಬಗ್ಗೆ ಸರಿಯಾದ ಅರಿವು ಇರಬೇಕು. ಬದುಕಿನ, ಬದುಕುವ ದಾರಿಯ ಮಾರ್ಗದರ್ಶನವೇ ಶಿಕ್ಷಣ. ಶಿಕ್ಷಣದ ಗುರಿ ವ್ಯಕ್ತಿ ನಿರ್ಮಾಣ ಸಾವಿದ್ಯಾ   ಎಂಬ ಮಾತಿನಂತೆ ನಿಜವಾದ ವಿದ್ಯೆ ವ್ಯಕ್ತಿಯನ್ನು  ಅಂಧಕಾರದಿಂದ  ಬೆಳಕಿನತ್ತ ಕೊಂಡೊಯ್ಯುತ್ತದೆ. ಗಾಂಧೀಜಿಯವರು ಶಿಕ್ಷಣವು ಅ A man making process ಎಂದಿದ್ದಾರೆ.

ಸಮಾಜ ಬಯಸುವ ನಿರ್ದಿಷ್ಟ ಬದಲಾವಣೆಯನ್ನು ತರುವುದೇ ಶಿಕ್ಷಣ. ಭಾರತೀಯ ಶಿಕ್ಷಣದ ಕಲ್ಪನೆಯನ್ನು ಉಪನಿಷತ್ತಿನ ನಾಲ್ಕು ಸಾಲುಗಳು ಸೂಚಿಸುತ್ತವೆ. ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯ ಸ್ವಮೇದಯಾ| ಪಾದಂ ಸ ಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ಚ || ಶಿಕ್ಷಣ ವ್ಯಕ್ತಿಗೆ ಯಶಸ್ವೀ ಜೀವನ ಮಾಡಲು ಪೂರಕವಾಗಿರಬೇಕು. 1997ರಲ್ಲಿ ನೇಮಕವಾದ ವಿಶ್ವ ಶಿಕ್ಷಣ  ವರದಿThe  Tresure within  ಹೇಳುವಂತೆ ಶಿಕ್ಷಣದಲ್ಲಿ Learning to learn, learning to do, learning to be, learning to live ಈ ನಾಲ್ಕು ಮುಖ್ಯ ಹಂತಗಳು. ಇವುಗಳನ್ನು ಸರಿಯಾಗಿ ಶಿಕ್ಷಣದಲ್ಲಿ ಅಳವಡಿಸುವವರೆಗೆ ಭಾರತದಲ್ಲಿ ಶಿಕ್ಷಣ ಉತ್ತಮ ಮಟ್ಟ ಮುಟ್ಟಲಾರದೆಂದು ತಜ್ಞರ ಅಭಿಪ್ರಾಯವಾಗಿದೆ.

ಒಂದು ರಾಷ್ಟ್ರದ ಅಭಿವೃದ್ಧಿ ಶಿಕ್ಷಣ ವ್ಯವಸ್ಥೆಯನ್ನೇ ಅವಲಂಬಿಸಿದೆ. ಇಂದಿನ ಯುವ ಪೀಳಿಗೆಯನ್ನು ನಾಳಿನ ಉತ್ತಮ ಸತ್ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ-ಶಿಕ್ಷಕರು ದೇಶದ ನಿಜವಾದ ನಿರ್ಮಾಣ ಶಿಲ್ಪಿಗಳು. ಇಂದಿನ ಯುವಕರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ವಾಸ್ತವಾಂಶಗಳ ಬಗೆಗೆ ವೈಜ್ಞಾನಿಕ ಅರಿವು ಮೂಡಿಸುವುದರಿಂದ ಮುಂದೆ ಅವರು ದೇಶದ ಜನೆಗಳು ಹಾಗೂ ಧ್ಯೇಯ-ದೋರಣೆಗಳನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ನಿರ್ವಹಿಸಿ ದೇಶದ ಉನ್ನತಿಗೆ ನಾಂದಿ ಹಾಡುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಣ-ಶಿಕ್ಷಕ ದೇಶದ ಅಬಿವೃದ್ಧಿಯ ಬೆನ್ನೆಲುಬು ಎಂಬುದರಲ್ಲಿ ಸಂದೇಹವಿಲ್ಲ. ಭಾರತದ ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಸರ್ವ ಶ್ರೇಷ್ಠ ಅಧ್ಯಾಪಕ-ವಿದ್ವಾಂಸ-ಶ್ರೇಷ್ಠ ತತ್ತ್ವಜ್ಞಾನಿ-ಆಡಳಿತಗಾರರಾಗಿದ್ದರು. ಸೆಪ್ಟೆಂಬರ್ 5 ಅವರ ಜನ್ಮ ದಿನ.

  • ಡಾ.ಸಿ. ನಂಜುಂಡಯ್ಯ  
Facebook Comments

Sri Raghav

Admin