ಧಾರಾವಾಹಿ ಬಿಟ್ಟು ನಾಟಕ ನೋಡಿ ರಂಗ ಕಲಾವಿದರನ್ನು ಪ್ರೋತ್ಸಾಹಿಸಿ : ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

Dr.-Panditharadhya-Shivacha

ಚಿತ್ರದುರ್ಗ ಸೆ.3-ಜನಜಾಗೃತಿ, ತತ್ವ ಪ್ರಚಾರ ಮತ್ತು ಸಾಮಾಜಿಕ ಪ್ರಜ್ಞೆ  ಮೂಡಿಸುವುದೇ ನಾಟಕದ ಮೂಲ ಉದ್ದೇಶವಾಗಿದೆ. ನಾಟಕಗಳಿಗೆ ಮನ ಪರಿವರ್ತನೆ ಮಾಡುವ ಶಕ್ತಿ ಇದೆ. ಧಾರಾವಾಹಿ ಬಿಟ್ಟು ನಾಟಕ ನೋಡಿ ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಎಸ್.ಜೆ.ಎಂ.ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಕಲಾವಿದರ ನಾಟಕ ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಲಾವಿದರಲ್ಲಿ ತಾರತಮ್ಯ ಇರುವುದಿಲ್ಲ. ಸರ್ಕಾರ ಮತ್ತು ಮಂತ್ರಿಗಳಿಗೆ ದಲಿತ ಬಲಿತ ಹಣೆಪಟ್ಟಿ ಬೇಡ ಎಂಬುದನ್ನು ಗಮನಕ್ಕೆ ತರಲಾಗಿದೆ.

ಆದರೂ ಸರ್ಕಾರ ಕಲಾವಿದರನ್ನು ಯಾವ ರೀತಿ ಪರಿಗಣಿಸುತ್ತಿದೆಯೋ ಗೊತ್ತಿಲ್ಲ. ಒಟ್ಟಾರೆ ದಲಿತ ಬಲಿತ ಎಂಬ ತಾರತಮ್ಯ ಬೇಡ ಎಂದರು. ಡಾ.ಶಿವಮೂರ್ತಿ ಮುರುಘಾಶರಣರು ಮಾತನಾಡಿ, ಸಿರಿಗೆರೆ ಮತ್ತು ಮುರುಘಾಮಠದ ಮೂಲ ಉದ್ದೇಶ ಬಸವತತ್ವ ಪ್ರಚಾರ. ಎರಡೂ ಮಠಗಳು ಸಾಮಾಜಿಕ ಕಾರ್ಯ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಿವೆÉ. ಜೊತೆಗೆ ಸಾಂಸ್ಕøತಿಕ ವಾತಾವರಣವನ್ನು ಇಟ್ಟುಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ಹೇಳುವ ಮೂಲಕ ಸಿರಿಗೆರೆ ಮಠದ ಬಗ್ಗೆ ಮೊದಲ ಬಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸುಮಾರು ವರ್ಷಗಳ ಹಿಂದೆ ಎರಡು ಕಲಾ ಸಂಘಗಳು ಜನ್ಮತಾಳಿ ಸಮಾಜಮುಖಿಯಾಗಿ ನಾಟಕ ಪ್ರದರ್ಶಿಸಿ ಉತ್ತಮ ಸಂದೇಶ ಸಾರುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಮೆರಿಕಾಕಕ್ಕೆ ಹೋಗಲು ವೀಸಾ ಕಾರಣಾಂತರದಿಂದ ಕೈ ತಪ್ಪಿತು. ಮುಂದಿನ ದಿನಗಳಲ್ಲಿ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮಂಜುನಾಥ್‍ಗೊಪ್ಪೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಫಾತ್ಯರಾಜನ್ ಹಾಗೂ ಇತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin