ಬಸ್ ಮೇಲೆ ಮುರಿದು ಬಿದ್ದ ಮರ : ಪ್ರಾಣಾಪಾಯದಿಂದ ಪಾರಾದ ಸಾಯಿ ಭಕ್ತರು

ಈ ಸುದ್ದಿಯನ್ನು ಶೇರ್ ಮಾಡಿ

Treee

ಬೆಂಗಳೂರು, ಸೆ.3- ಬೆಳ್ಳಂಬೆಳಗ್ಗೆ ಶಿರಡಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಬೃಹದಾಕಾರದ ಮರ ದಿಢೀರ್ ಉರುಳಿಬಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದಿಂದ ಶಿರಡಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ನಲ್ಲಿ 26 ಪ್ರಯಾಣಿಕರಿದ್ದರು. ಬಸ್ ಮೆಜೆಸ್ಟಿಕ್ನಿಂದ ಮಲ್ಲೇಶ್ವರಂ 11ನೇ ಕ್ರಾಸ್ಗೆ ಆಗಮಿಸಿದ ಸಂದರ್ಭದಲ್ಲಿ ರಸ್ತೆ ಬದಿಯ ಬೃಹದಾಕಾರಾದ ಹೊಂಗೆ ಮರದ ರೆಂಬೆ ಬಸ್ ಮೇಲೆ ಉರುಳಿಬಿತ್ತು.   ಮರ ಉರುಳಿಬಿದ್ದ ರಭಸಕ್ಕೆ ಬಸ್ನ ಗಾಜು ಪುಡಿಪುಡಿಯಾಯಿತು. ಶ್ರೀ ಸಾಯಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು ಬೆಚ್ಚಿಬಿದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ, ಮರದ ರೆಂಬೆ ಮುರಿದು ಬಿದ್ದ ಘಟನೆಯಲ್ಲಿ ಒಂದು ಸ್ಕಾರ್ಪಿಯೋ ಮತ್ತು ಆಟೋವೊಂದು ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಬಸ್ ಮೇಲೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin