ಬೈಕ್‍ಗಾಗಿ ಬಾವನನ್ನ ಕೊಂದ ಬಾಮೈದ

ಈ ಸುದ್ದಿಯನ್ನು ಶೇರ್ ಮಾಡಿ

BHAVA--BAMAIDA

ಟಿ.ನರಸೀಪುರ,ಸೆ.3-ಬೈಕ್‍ಗಾಗಿ ಭಾವ-ಮೈದುನನ ನಡುವೆ ನಡೆದ ಜಗಳ ಭಾವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಎಡತೊರೆ ಗ್ರಾಮದಲ್ಲಿ ನಡೆದಿದೆ. ಮಹೇಶ್(28) ಕೊಲೆಯಾದ ಭಾವ. ಕೆಲಸದ ನಿಮಿತ್ತ ಮಹೇಶ ತನ್ನ ಭಾಮೈದ ಕೈಲಾಶ್ ಬಳಿ ಬೈಕ್ ಕೇಳಿದ್ದು ಬೈಕ್ ಕೊಡಲು ಕೈಲಾಶ್ ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.  ಈ ಜಿದ್ದಿನಿಂದ ಕೈಲಾಶನ ಸ್ನೇಹಿತರು ಸೇರಿಕೊಂಡು ಮಹೇಶನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಚಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹಲ್ಲೆ ನಡೆಸಿದ ಐವರನ್ನು ಟಿ.ನರಸೀಪುರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin