ಬೈಕ್-ಟ್ರ್ಯಾಕ್ಟರ್ ಡಿಕ್ಕಿ : ಸವಾರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident
ಹುಣಸೂರು, ಸೆ.3- ಬೈಕ್ ಮತ್ತು ಟ್ರ್ಯಾಕ್ಟರ್ ನಡುವಿನ ಮುಖಾ-ಮುಖಿ ಡಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹನಗೋಡು ಹೋಬಳಿಯ ಮುತ್ತುರಾಯನಹೊಸಹಳ್ಳಿಯ ಜಗದೀಶ್(40)ಮೃತಪಟ್ಟವರು.  ಜಗದೀಶ್ ಹನಗೋಡಿನ ಸಮೀಪದ ಕೋಣನಹೊಸಹಳ್ಳಿಯ ರೈತರಿಂದ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರು, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರಾತ್ರಿ ಜಮೀನಿನ ಕಾವಲಿಗೆ ತನ್ನ ಬೈಕಿನಲ್ಲಿ ಮುತ್ತುರಾಯನ ಹೊಸಹಳ್ಳಿಯಿಂದ ಕೋಣನಹೊಸಹಳ್ಳಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಹನಗೋಡು-ಹೆಮ್ಮಿಗೆ ರಸ್ತೆಯ ಗೌಡಿಕೆರೆ ಶುಂಠಿ ಪಾಲೀಷ್ ಮಾಡಿಸಲು ನೇಗತ್ತೂರಿನಿಂದ ಶುಂಠಿ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಇವರ ಬೈಕ್‍ಗೆ ಮುಖಾ-ಮುಖಿ ಡಿಕ್ಕಿಹೊಡೆದ ರಭಸಕ್ಕೆ ತಲೆ, ಕೈ-ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್.ಐ.ಪುಟ್ಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣದಾಖಲಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin