‘ಮಂಡ್ಯ ಟು ಮುಂಬೈ’

ಈ ಸುದ್ದಿಯನ್ನು ಶೇರ್ ಮಾಡಿ

belagam-000000

ನಾಲ್ಕು ವರ್ಷಗಳ ಹಿಂದೆ ಡ್ರಮ್ಮರ್ ದೇವಾ ಅವರ ಪುತ್ರ ಜೋಸೆಫ್ ತೆಲುಗಿನ ಹೆಸರಾಂತ ರೇಣುಗುಂಟಾ ಎಂಬ ಚಿತ್ರವನ್ನು ಕನ್ನಡದಲ್ಲಿ ಆನೆಕೆರೆ ಬೀದಿ ಹೆಸರಿನಿಂದ ಆರಂಭಿಸಿದರು. ಸಿನಿಮಾ ಆರಂಭವಾದ ಗಳಿಗೆ ನೆಟ್ಟಿಗಿದ್ದಲ್ಲವೋ ಏನೋ ಕುಂಟುತ್ತಾ ಸಾಗಿದ ಆ ಚಿತ್ರದ ಶೀರ್ಷಿಕೆ ಮಂಡ್ಯ ಟು ಮುಂಬೈ ಅಂತ ಬದಲಾಗಿ ಗ್ರಾಂಡಾಗಿ ಆಡಿಯೋ ಸೆಲಬ್ರೇಟ್ ಮಾಡಿಕೊಂಡಿತು. ನಂತರ ಜೋಸೆಫ್ ಆ ತಂಡದಿಂದ ಹೊರಬಂದರು. ಈಗ ರಾಜಶೇಖರ್ ಎಂಬ ನಿರ್ದೇಶಕ ಉಳಿದ 40ರಷ್ಟು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಅಣಿಗೊಳಿಸಿದ್ದಾರೆ. ಒಂದು ಚಿತ್ರಕ್ಕೆ ಇಬ್ಬರು ನಿರ್ದೇಶಕರು, 2 ಶೀರ್ಷಿಕೆ ಇಟ್ಟಿರುವುದು ಇದೇ ಮೊದಲೆನ್ನಬಹುದು. ಅಂತೂ ಇಂತೂ ಹೊಸ ರೂಪ ಹೊಸ ವಿನ್ಯಾಸದೊಂದಿಗೆ ಚಿತ್ರವೀಗ ರಿಲೀಸ್‍ಗೆ ಸಿದ್ಧವಾಗಿದೆ.

ರಾಕೇಶ್, ನವೀನ್ ಕೃಷ್ಣ, ಶೇಖರ್, ಚಂದನ, ಚಿರಾಗ್, ಮಾಧುರಿ, ತಿಪ್ಪಟ್ಟಿ ಗಣೇಶ್, ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚರಣರಾಜ ಈ ಚಿತ್ರದ 6 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಟಿ ಸಂಜನಾ ಒಂದು ಮೇಜರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜ್ಯೋತಿರ್ಲಿಂಗಂ ಹಾಗೂ ಗಣೇಶ್ ಈ ಚಿತ್ರದ ನಿರ್ಮಾಪಕರು, ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರ ತಂಡ ಹಾಜರಾಗಿ ಮಾತನಾಡಿತು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಒಂದು ಹಾಡನ್ನು ಹಾಡಿದ್ದು, ಈ ಯುವ ತಂಡಕ್ಕೆ ಧ್ವನಿ ನೀಡುವ ಮೂಲಕ ಸಾಥ್ ನೀಡಿದ್ದಾರೆ.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin