ವಿವಾದದಲ್ಲಿ ಸಿಲುಕಿದ ಕಂಚಿನ ಹುಡುಗಿ ಸಾಕ್ಷಿ ಮಲಿಕ್

ಈ ಸುದ್ದಿಯನ್ನು ಶೇರ್ ಮಾಡಿ

Sakshi-Malin-02

ಹಿಸಾರ್ ( ಹರಿಯಾಣ), ಸೆ.3-ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸೆಲಿಬ್ರೆಟಿ ಆದ ಮೇಲೆ ಅವರು ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾದರೂ ಆಯೋಜಕರಿಂದ 5 ಲಕ್ಷ ರೂಪಾಯಿ ಹಣ ಪಡೆದುಕೊಳ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.  ಹರಿಯಾಣ ಹಿಂದೂ ಮಹಾಸಭಾ ಸಾಕ್ಷಿ ಮಲಿಕ್ ಮೇಲೆ ಈ ಗಂಭೀರ ಆರೋಪ ಮಾಡಿದ್ದು, ಸಾಕ್ಷಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಲು ಅವರ ತಾಯಿಗೆ ಫೋನ್ ಮಾಡಿದಾಗ 5 ಲಕ್ಷ ಹಣ ನೀಡಿದ್ರೆ ಮಾತ್ರ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಅವರು ಹೇಳಿರುವ ಫೋನ್ ಸಂಭಾಷಣೆ ರಿಲೀಸ್ ಮಾಡಿದೆ.

ಸಾಕ್ಷಿ ಮಲಿಕ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿರುವುದಾಗಿ ಹೇಳಿ ಹಿಂದೂ ಮಹಾಸಭಾ ರಾಜ್ಯ ವಕ್ತಾರ ಲಲಿತ್ ಭಾರದ್ವಾಜ್, ಸಾಕ್ಷಿ ಮಲಿಕ್ ತಾಯಿಗೆ ಫೋನ್ ಮಾಡಿದ್ದ ವೇಳೆ ಅವೆರು 5ಲಕ್ಷ ಹಣ ಬೇಡಿಕೆ ಇಟ್ಟಿದ್ದಾರಂತೆ. ಈ ಬಗ್ಗೆ ಲಲಿತ್ ಭಾರದ್ವಾಜ್ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದು, ಅದು ಈನಾಡು ಇಂಡಿಯಾಗೆ ಲಭ್ಯವಾಗಿದೆ.  ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್ ತಾಯಿ, ಸಾಕ್ಷಿ ಮಲಿಕ್ ಸೆಲಿಬ್ರೆಟಿ ಆದ ಮೇಲೆ ಜೆಎಸ್ಡಬ್ಲೂ ಅವರ ಪ್ರಾಯೋಜಕತ್ವ ಪಡೆದುಕೊಂಡಿದೆ. ಹೀಗಾಗಿ ಅವರು ಯಾವುದೇ ಕಾರ್ಯಕ್ರಮಕ್ಕೂ ತೆರಳಿದ್ರೂ 5 ಲಕ್ಷ ಹಣ ಪಡೆದುಕೊಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜೆಎಸ್ಡಬ್ಲೂ ನಿರ್ಧರಿಸಿ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin