ಅಪಘಾತದಲ್ಲಿ -ಕರ್ತವ್ಯ ನಿರತ ಬಿಎಂಟಿಸಿ ಬಸ್ ಕಂಡಕ್ಟರ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

MBTC-Driver

ಬೆಂಗಳೂರು, ಸೆ.4-ಕರ್ತವ್ಯ ನಿರತ ಬಿಎಂಟಿಸಿ ಕಂಡಕ್ಟರ್ ಇಂದು ಬೆಳಗ್ಗೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ಶಿವಲಿಂಗಯ್ಯ (54) ಮೃತಪಟ್ಟ ಕಂಡಕ್ಟರ್. ಶಿವಲಿಂಗಯ್ಯ ಅವರು ಬಿಎಂಟಿಸಿಯ ಡಿಪೋ 22 ರಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪೀಣ್ಯ ಜಾಲಹಳ್ಳಿ ಕ್ರಾಸ್‍ನಲ್ಲಿ ಬಸ್ ಹಿಂದೆ ಚಲಿಸಲು ಸೂಚನೆ ನೀಡಲೆಂದು ಕೆಳಗಿಳಿದಿದ್ದ ಕಂಡಕ್ಟರ್ ಶಿವಲಿಂಗಯ್ಯನಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪೀಣ್ಯ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin