ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷೆಣೆಗಿಳಿದ 11 ಸಾವಿರ ಸಂಘ ಪರಿವಾರದ ಕಾರ್ಯಕರ್ತರು..?

ಈ ಸುದ್ದಿಯನ್ನು ಶೇರ್ ಮಾಡಿ
RSS-'a
ಸಾಂಧರ್ಭಿಕ ಚಿತ್ರ

ಪಾಟ್ನಾ, ಸೆ.4- ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರು ಸಂತ್ರಸ್ತರ ರಕ್ಷಣೆಗೆ ಕಾರ್ಯನಿರತರಾಗಿದ್ದಾರೆಂಬ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.   ವಿಹಿಂಪ, ಸೇವಾ ಭಾರತಿ, ಭಜರಂಗ ದಳ, ಎಬಿವಿಪಿ, ವನವಾಸಿ ಕಲ್ಯಾಣ ಆಶ್ರಮ ಮೊದಲಾದ ಸಂಘ ಪರಿವಾರದ ಸಂಘಟನೆಗಳ ಸುಮಾರು 11 ಸಾವಿರ ಕಾರ್ಯಕರ್ತರು ರಕ್ಷಣಾ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂದು ಆರೆಸ್ಸೆಸ್ ಕಾರ್ಯಕರ್ತರೊಬ್ಬರು ತಿಳಿಸಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಈ ವರದಿ ಪ್ರಕಾರ, ಆರ್ಎಸ್ಎಸ್ ಕಾರ್ಯಕರ್ತರು ಸರಕಾರದ ನೆರವಿಲ್ಲದೆಯೇ ಸುಮಾರು 66 ಸಾವಿರ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರಂತೆ. ಆದರೆ, ಇವರ ರಕ್ಷಣಾ ಕಾರ್ಯಕ್ಕೆ ಬಿಹಾರ ಸರಕಾರ ತಡೆಯೊಡ್ಡುತ್ತಿದೆ ಎಂಬುದು ಆರ್ಎಸ್ಎಸ್ನವರ ಆರೋಪವಾಗಿದೆ.

ಪರಿಹಾರ ಸಾಮಗ್ರಿಗಳಿರುವ ಬೋಟ್ಗಳನ್ನು ಸರಕಾರ ವಶಪಡಿಸಿಕೊಳ್ಳುತ್ತಿರುವ ಪ್ರಕರಣ ಅಲ್ಲಲ್ಲಿ ನಡೆಯುತ್ತಿದೆ. ಸರ್ಕಾರೇತರ ಸಂಸ್ಥೆಗಳು ಪರಿಹಾರ ಕಾರ್ಯದ ಕ್ರೆಡಿಟ್ ತೆಗೆದುಕೊಳ್ಳಬಹುದೆಂಬ ಭೀತಿಯಿಂದ ಸರಕಾರ ಇಂಥ ಕೆಲಸ ಮಾಡುತ್ತಿದೆ ಎಂಬುದು ಆರ್ಎಸ್ಎಸ್ ಕಾರ್ಯಕರ್ತರ ಆರೋಪವಾಗಿದೆ.

ಸರಕಾರದ ತಿರುಗೇಟು:
ಆರ್ಎಸ್ಎಸ್ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆಂಬ ಸುದ್ದಿಯನ್ನು ಬಿಹಾರ ಸರಕಾರ ತಳ್ಳಿಹಾಕಿದೆ. ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲೆಲ್ಲಿಯೂ ಆರೆಸ್ಸೆಸ್ನವರು ಕಾಣಿಸುತ್ತಿಲ್ಲ. ಸಂತ್ರಸ್ತರಿಗೆ ಬಿಹಾರ ಸರಕಾರ ಏನೂ ಮಾಡುತ್ತಿಲ್ಲವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆಯಷ್ಟೇ. ಆರೆಸ್ಸೆಸ್ನ ಮೂಗುದಾರ ಹೊಂದಿರುವ ಕೇಂದ್ರ ಸಚಿವರಿಗೆ ಯಾರ ಬಗ್ಗೆಯೂ ಚಿಂತೆ ಇಲ್ಲ. ಇಲ್ಲಿಗೆ ಬಂದು ವೈಮಾನಿಕ ಸಮೀಕ್ಷೆ ನಡೆಸಿ ದಿಲ್ಲಿಗೆ ವಾಪಸ್ಸಾಗುತ್ತಾರಷ್ಟೇ ಹೊರತು ಏನನ್ನೂ ಕೊಡುತ್ತಿಲ್ಲ ಎಂದು ಬಿಹಾರದ ಸಚಿವ ಚಂದ್ರಶೇಖರ್ ಟೀಕಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin