ಗಣೇಶಸಿಂಗ ಬ್ಯಾಳಿ ಅಭಿನಂದನಾ ಸಮಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

belgam-7
ಗದಗ,ಸೆ.6- ಸಮಾಜಕ್ಕಾಗಿ ದುಡಿದವರನ್ನ ಗೌರವಿಸಲು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಆ ಹಿನ್ನೆಲೆಯಲ್ಲಿ ನಾಲ್ಕು ದಶಕಗಳ ಕಾಲ ಸಮಾಜ ಮುಖಿ ಸೇವೆ ಸಲ್ಲಿಸಿದ ಗಣೇಶಸಿಂಗ ಬ್ಯಾಳಿಯವರನ್ನು ಅಭಿನಂದಿನಾ ಕಾರ್ಯಕ್ರಮ ಇದೇ 10ರಂದು ಶ್ರೀ ರಂಗಪ್ಪಜ್ಜನ ಸಮುದಾಯ ಭವನದಲ್ಲಿ ನಡಯಲಿದೆ ಎಂದು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರ ಹಾಗೂ ಮಾಜಿ ಶಾಸಕ ಡಿ.ಆರ್ ಪಾಟೀಲ ಹೇಳಿದರು. ಅವರು ನಗರದ ವಿದ್ಯಾದಾನ ಸಮಿತಿಯ ಬಾಲಕರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಮಾಜ ಸೇವಕ ಗಣೇಶಸಿಂಗ ಬ್ಯಾಳಿ ಅಭಿನಂದನಾ ಸಮಿತಿ ಆಯೋಜಿಸಿದ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣೇಶಸಿಂಗ ಬ್ಯಾಳಿಯವರ ನಾಲ್ಕು ದಶಕಗಳ ಹೋರಾಟ ಸಾಧನೆ ಸೇವೆಗಳ ದಾಖಲೀಕರಣ ಗೊಳಿಸುವ ಮೂಲಕ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುದೆಂದು ಹೇಳಿದರು.

ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ಡಾ. ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಮಾಜಿ ಶಾಸಕರು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಡಿ.ಆರ್ ಪಾಟೀಲ ಅಧ್ಯಕ್ಷತೆಯನ್ನು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವರಾದ ಎಚ್.ಕೆ ಪಾಟಿಲ ನೆರವೇರಿಸುವರು. ಅಭಿನಂದನಾ ಗ್ರಂಥವನ್ನ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ವಿ.ಪ ಸದಸ್ಯ ಎಸ್.ವಿ ಸಂಕಣೂರ ಭಾಗವಹಿಸುವರು. ಅತಿಥಿಗಳಾಗಿ ಜಿ.ಪಂ ಅಧ್ಯಕ್ಷರಾದ ವಾಸಣ್ಣಾ ಕುರುಡಗಿ, ನಗರಸಭೈ ಅಧ್ಯಕ್ಷರಾದ ಶಿವಲೀಲಾ ಅಕ್ಕಿ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರಣ್ಣಾ ಬಳಗಾನೂರ, ನಗರಸಭೈ ಉಪಾಧ್ಯಕ್ಷ ಕೃಷ್ಣಾ ಪರಾಪುರ ಮುಂತಾದವರು ಭಾಗವಹಿಸುವರು. ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಧೀರೆಂದ್ರ ಹುಯಿಲಗೋಳ ಮಾತನಾಡಿ, ಗಣೇಶಸಿಂಗ ಬ್ಯಾಳಿ ಒಬ್ಬ ಸ್ನೇಹ ಜೀವಿ, ಸಂಘಟನೆ ಹೋರಾಟಕ್ಕೆ ಗಣೇಶಸಿಂಗ ಬ್ಯಾಳೀ ಅವರ ಹೋರಾಟ ಒಂದು ಹೆಜ್ಜೆ ಸದಾ ಮುಂದಿರುತ್ತದೆ.

ಇಂತಹ ಸ್ನೇಹಿತನ ಅಭಿನಂದನಾ ಕಾರ್ಯಕ್ರಮವನ್ನ ಅತ್ಯಂತ ಗೌರವಿತವಾಗಿ ಆಚರಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಡಾ. ಬಸವರಾಜ ಧಾರವಾಡ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರಣ್ಣಾ ಬಳಗಾನೂರ, ಗದಗ ಬೆಟಗೇರಿ ನಗರಸಭೈ ಸದಸ್ಯ ಶ್ರೀನಿವಾಸ ಹುಯಿಲಗೋಳ, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಡಾ. ಶಿವಣ್ಣಾ ಕುರಿ, ಅಭಿನಂದನಾಸಮಿತಿಯ ಅಧ್ಯಕ್ಷ ಈರಣ್ಣಾ ಮುಳ್ಳಾಳ, ಪ್ರಧಾನ ಕಾರ್ಯದರ್ಶಿ ಎಸ್.ಎಮ್ ಕೊಟಗಿ, ಸಂಘಟನಾ ಕಾರ್ಯದರ್ಶಿ ಎಸ್.ಎಮ್ ಅಗಡಿ, ಉಪಾಧ್ಯಕ್ಷ ಪ್ರಾ.ಬಿ.ಬಿ ಗೌಡರ, ಸಹ ಕಾರ್ಯದರ್ಶಿ ಪ್ರೇಮನಾಥ ಭರದ್ವಾಡ, ಭೈೂೀಜಪ್ಪ ಹೆಗ್ಗಡಿ, ಬಸವರಾಜ ಚಿತ್ತರಗಿ, ಎಸ್.ಎನ್ ಖಾಜಿ, ಅಶೋಕ ಮಂದಾಲಿ, ಡಿಎಚ್ ನಾಯ್ಕರ, ವಿ.ವಿ ಬಳಿಗಾರ, ಮುತಾಂದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin