ತಮಿಳುನಾಡಿಗೆ ಬಿಡಬೇಕಿರುವುದು 13.6 ಟಿಎಂಸಿ ಅಲ್ಲ 20 ಟಿಎಂಸಿಗೂ ಹೆಚ್ಚು..! ಇಲ್ಲಿದೆ ನೋಡಿ ಅಸಲಿ ಲೆಕ್ಕ

ಈ ಸುದ್ದಿಯನ್ನು ಶೇರ್ ಮಾಡಿ

KRS-Dam-01

ಬೆಂಗಳೂರು, ಸೆ.6– ಸುಪ್ರೀಂಕೋರ್ಟ್ ದಿನಕ್ಕೆ 15 ಸಾವಿರ ಕ್ಯುಸೆಕ್‍ನಂತೆ 10 ದಿನ ನೀರು ಬಿಡಿ ಎಂದು ತತ್‍ಕ್ಷಣದ ಆದೇಶ ನೀಡಿದೆ. ಆದರೆ, ನಿಜವಾದ ಲೆಕ್ಕಾಚಾರ ಬೇರೆಯೇ ಇದೆ. ಆ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಬಿಡಬೇಕಿರುವುದು 13.6 ಟಿಎಂಸಿ ನೀರಲ್ಲ, 20 ಟಿಎಂಸಿಗೂ ಹೆಚ್ಚು.
ಹೇಗೆ?
ಕೆಆರ್‍ಎಸ್‍ನಿಂದ ತಮಿಳುನಾಡಿನ ಬಿಳಿಗುಂಡ್ಲುವಿಗೆ 98 ಕಿಮೀ ದೂರ ಇದೆ. ಆ 98 ಕಿಲೋ ಮೀಟರ್ ಉದ್ದಕ್ಕೂ ನಾವು ಬಿಟ್ಟ ನೀರು ಹರಿಯಬೇಕು. ನಿಮಗೆ ಗೊತ್ತಿರಲಿ… ಇದು ಹರಿಯವುದು ಕಾಲುವೆಗಳಲ್ಲಿ ಅಲ್ಲ. ನದಿಯಲ್ಲೇ… ಹೊಳೆಯ ಮೂಲಕವೇ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಸೇರಬೇಕು. ಈ ಮಧ್ಯೆ 5 ಜಿಲ್ಲೆಗಳು ಬರುತ್ತವೆ.
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ. ಈ ಭಾಗದಲ್ಲಿ ಕಾವೇರಿ ನದಿಯ ಹರಿವಿನ ಅಗಲ 300 ಮೀಟರ್ ಎಂದರೆ, ಸುಮಾರು ಒಂದು ಸಾವಿರ ಅಡಿಯಷ್ಟು ಅಗಲವಾಗಿ ಹೊಳೆ ಹರಿಯುತ್ತೆ.
ಇದರ ಮಧ್ಯೆ ಹಳ್ಳಿಗಳು ಬರುತ್ತವೆ. ಆ ಹಳ್ಳಿಗಳಿಗೆ ಆ ನೀರು ಹೋಗುತ್ತೆ. ತಲುಪುವ ಮಧ್ಯೆ ನೀರು ಆವಿಯಾಗುತ್ತೆ. ದನ-ಕರುಗಳಿಗೆ, ಜನಗಳಿಗೆ ಇದೇ ನೀರು ಬಳಕೆಯೂ ಆಗುತ್ತೆ. ಇಷ್ಟೆಲ್ಲ ಆಗುವ ಕಾರಣ ಕೆಆರ್‍ಎಸ್‍ನಿಂದ ಲೆಕ್ಕಾಚಾರದಂತೆ 13.6 ಟಿಎಂಸಿ ನೀರನ್ನಷ್ಟೇ ಬಿಟ್ಟರೆ, ಅದು ಬಿಳಿಗುಂಡ್ಲುವಿನ ಅಷ್ಟೇ ಲೆಕ್ಕ ಸಿಕ್ಕೋದಿಲ್ಲ. ಆ ಲೆಕ್ಕ ತಲುಪಬೇಕು ಎಂದರೆ, ಕರ್ನಾಟಕ ಈ ಎಲ್ಲವನ್ನೂ ಲೆಕ್ಕ ಹಾಕಿಕೊಂಡು ಕನಿಷ್ಠ 20 ಟಿಎಂಸಿ ನೀರು ಬಿಡಬೇಕಾಗುತ್ತೆ. ಆಗಷ್ಟೇ ಬಿಳಿಗುಂಡ್ಲುವಿನಲ್ಲಿ 13.6 ಟಿಎಂಸಿ ನೀರಿನ ಲೆಕ್ಕ ಸಿಗೋಕೆ ಸಾಧ್ಯ. ಇದರ ಮಧ್ಯೆ ಬಿಳಿಗುಂಡ್ಲುವಿಗೆ ತಲುಪಿಸೋಕೆ ಕಬಿನಿ, ಹಾರಂಗಿ, ಹೇಮಾವತಿಯಿಂದ ಕೆಆರïಎಸï¿ಗೆ ನೀರು ಹರಿಸುತ್ತೇವಲ್ಲ… ಆ ದಾರಿ ಮಧ್ಯೆಯೂ ಇವೇ ಕಾರಣಗಳಿಂದ ಒಂದಷ್ಟು ನೀರು ನಷ್ಟವಾಗುತ್ತೆ.

ಯಾವ್ಯಾವ ಡ್ಯಾಂನಿಂದ ಎಷ್ಟೆಷ್ಟು ನೀರು..?
ಕೆಆರ್‍ಎಸ್ – 10 ಟಿಎಂಸಿ ಮಾತ್ರ (ಉಳಿದದ್ದು ಡೆಡ್ ಸ್ಟೋರೇಜï)
ಕಬಿನಿಯಿಂದ – 4.8 ಟಿಎಂಸಿ
ಹಾರಂಗಿಯಿಂದ – 6.8 ಟಿಎಂಸಿ
ಹೇಮಾವತಿಯಿಂದ – 14 ಟಿಎಂಸಿ
ನಿಮಗೆ ಇನ್ನೂ ಒಂದು ವಿಚಾರ ಗೊತ್ತಿರಲಿ. ಇಷ್ಟೆಲ್ಲ ಆದ ಮೇಲೆ ಅಷ್ಟೂ ಡ್ಯಾಂಗಳಲ್ಲಿ ಉಳಿದುಕೊಳ್ಳೊದು ಸದ್ಯದ ಲೆಕ್ಕದ ಪ್ರಕಾರ, 15 ಟಿಎಂಸಿ ನೀರು ಮಾತ್ರ. ಇದರಲ್ಲಿ ಬೆಂಗಳೂರಿನ ಜನರಿಗೆ ಪ್ರತಿದಿನ 800 ಕ್ಯುಸೆಕ್ ನೀರು ಬೇಕು. ಮೈಸೂರಿಗೆ 120 ಕ್ಯುಸೆಕ್ ನೀರು ಬೇಕು. ಇತರೆ ಹಳ್ಳಿಗಳ ಜನರ ಕುಡಿಯುವ ನೀರಿನ ಪೂರೈಕೆಯೂ ಸೇರಿಸಿ, ಒಟ್ಟು ಪ್ರತಿದಿನ 1300 ಕ್ಯೂಸೆಕ್ ನೀರು ಬೇಕು. ಹೀಗಾಗಿಯೇ… ಕಾವೇರಿಯ ಈ ತೀರ್ಪು ಭವಿಷ್ಯದ ಆತಂಕ ಹುಟ್ಟಿಸಿದೆ.

Facebook Comments

Sri Raghav

Admin