ಪೊಲೀಸ್ ಬಲೆಗೆ ಬಿದ್ದ ಪಿಜಿಗೆ ನುಗ್ಗಿ ಅತ್ಯಾಚಾರವೆಸಗಿದ್ದ ಕಾಮುಕ

ಈ ಸುದ್ದಿಯನ್ನು ಶೇರ್ ಮಾಡಿ

BCP
ಬೆಂಗಳೂರು, ಸೆ.6- ಮಹಿಳಾ ಪಿಜಿಯೊಂದಕ್ಕೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಮಡಿವಾಳ ಉಪವಿಭಾಗದ ಪೊಲೀಸರು ಬಂಸಿದ್ದಾರೆ.  ಮುರಳಿ (24) ಬಂತ ಕಾಮುಕ ನಾಗಿದ್ದು, ಮೂಲತಃ ಕೋಲಾರ ಜಿಲ್ಲೆಯ ಸಿಂಗೊಂಡಹಳ್ಳಿ ಗ್ರಾಮದವನಾದ ಈತ ಸುಮಾರು ಎರಡು ವರ್ಷಗಳಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆ.25ರಂದು ಮುಂಜಾನೆ 2.30ರಲ್ಲಿ ಪರಪ್ಪನ ಅಗ್ರಹಾರ ವ್ಯಾಪ್ತಿಯ ಮಹಿಳಾ ಪಿಜಿಯೊಂದಕ್ಕೆ ನುಗ್ಗಿ ಮಲಗಿದ್ದ ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಜೀವಬೆದರಿಕೆ ಹಾಕಿ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪರ ಪೊಲೀಸ್ ಆಯುಕ್ತ ಹರಿಶೇಖರನ್, ಉಪ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾರ್ಗ ದರ್ಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ 4 ತಂಡ ರಚಿಸಲಾಗಿತ್ತು.

ಘಟನೆ ನಡೆದ ದಿನದಂದು ಮಹಿಳೆಯು ನೀಡಿದ ಮುಖಚಹರೆ, ಆತನು ಧರಿಸಿದ್ದ ಬಟ್ಟೆ, ಮಾತನಾಡುವ ಭಾಷೆ, ವಯಸ್ಸು, ಮೈಕಟ್ಟು, ಹಾವ-ಭಾವ, ನಡಿಗೆಯ ರೀತಿ ಆಧಾರದ ಮೇಲೆ ಆರೋಪಿಯ ರೇಖಾಚಿತ್ರ ತಯಾರಿಸಿ ಅನುಭವ ಹೊಂದಿದ ನುರಿತ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿತ್ತು.  ಈ ಮಾಹಿತಿ ಆಧಾರದ ಮೇಲೆ ಪರಪ್ಪನ ಅಗ್ರಹಾರ ಮತ್ತು ಅಕ್ಕಪಕ್ಕದ ಠಾಣಾ ಸರಹದ್ದುಗಳಲ್ಲಿನ ಸುಮಾರು 200ಕ್ಕೂ ಅಕ ಅನುಮಾನಾಸ್ಪದ ಹಳೆ ಆರೋಪಿಗಳು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಕೃತ್ಯವನ್ನು ಹೊರಗಿನಿಂದ ಬಂದು ನಡೆಸಿರುವ ಬಗ್ಗೆ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಈ ತಂಡ ತೀವ್ರ ಕಾರ್ಯಾಚರಣೆ ನಡೆಸಿ ಮೋತಿನಗರದಲ್ಲಿ ವಾಸವಾಗಿದ್ದ ಆರೋಪಿ ಮುರಳಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ಈ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.

ಈ ಹಿಂದೆ ಮಹದೇವಪುರ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ವಶದಲ್ಲಿದ್ದು, ತದನಂತರ ತನ್ನ ಹಳೆ ಪ್ರವೃತ್ತಿಯನ್ನು ಮುಂದುವರಿಸಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.  ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ್‌ಬಾಬು, ಅಜಯ್, ಮಂಜುನಾಥ್, ಬಿ.ಕೆ.ಶೇಖರ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ಭರತ್, ಆನಂದ್, ಬಾಬು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದು, ಈ ವಿಶೇಷ ತಂಡ ವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin