ವೈದ್ಯರಿಗೆ ಆಮಿಷವೊಡ್ಡುವ ಔಷಧಿ ಕಂಪೆನಿಗಳಿಗೆ ಕಾದಿದೆ ಕಠಿಣ ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

doctor
ನವದೆಹಲಿ, ಸೆ.6- ವೈದ್ಯರಿಗೆ ಆಮಿಷವೊಡ್ಡುವ ಔಷಧಿ ಕಂಪೆನಿಗಳಿಗೆ ಭವಿಷ್ಯದಲ್ಲಿ ಕಠಿಣ ಶಿಕ್ಷೆ ಕಾದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಡ್ಡಾಯ ಔಷಧ ಮಾರುಕಟ್ಟೆ ಸಂಹಿತೆ ಜಾರಿಗೆ ಗೆ ಮುಂದಾಗಿದೆ.ಹುಷಾರ್ಕಳೆದ ಜನವರಿಯಲ್ಲಿ ಜಾರಿಗೆ  ಬಂದ ಸ್ವಯಂ ಪ್ರೇರಿತ ಸಂಹಿತೆ ಬದಲಾಗಿ ಇದೀಗ ಕಡ್ಡಾಯ ಸಂಹಿತೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.ಸ್ವಯಂಪ್ರೇರಿತ ಸಂಹಿತೆಯನ್ನು 2015ರ ಜೂನ್‍ವರೆಗೆ ಅನ್ವಯಿಸಲು ನಿರ್ಧರಿಸಲಾಗಿತ್ತು. ಇದು ಪರಿಣಾಮಕಾರಿಯಲ್ಲ ಎಂದು ಔಷಧ ನಿಯಂತ್ರಣ ವಿಭಾಗ ಪದೇ ಪದೇ ಒಪ್ಪಿಕೊಂಡರೂ, ನಾಲ್ಕು ಬಾರಿ ಇದನ್ನು ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು. ಕಡ್ಡಾಯ ಸಂಹಿತೆಯಲ್ಲಿ ಕಟ್ಟುನಿಟ್ಟಿನ ಶಿಕ್ಷಾ ಕ್ರಮಕ್ಕೂ ಅವಕಾಶವಿದ್ದು, ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.

ಸದ್ಯಕ್ಕೆ ಈ ಸಂಹಿತೆ ತೀರ ಮೆದುವಾಗಿದೆ. ಇದರ ಬದಲಿ ಕಡ್ಡಾಯ ಸಂಹಿತೆ ಜಾತಿಗೆ ಬಂದರೆ ಮಾತ್ರ ಜನರಿಗೆ ಪ್ರಯೋಜನವಾಗಬಹುದು. ಇದಕ್ಕೆ ಸಂಬಂಧಪಟ್ಟ ಎಲ್ಲರ ಜತೆ ಇದೀಗ ಮಾತುಕತೆ ಪೂರ್ಣಗೊಂಡಿದೆ. ಹೊಸ ಸಂಹಿತೆ ಬಗ್ಗೆ ಸಚಿವಾಲಯ ಕಾನೂನು ಅಭಿಪ್ರಾಯ ಪಡೆಯಲು ಮುಂದಾಗಿದೆ. ಇದು ಎಲ್ಲ ಫಾರ್ಮಾ ಹಾಗೂ ವೈದ್ಯಕೀಯ ಸಾಧನಗಳಿಗೆ ಅನ್ವಯಿಸುತ್ತದೆ ಎಂದು ವಿವರಿಸಿದ್ದಾರೆ.ಔಷಧ ಕಂಪೆನಿಗಳು ವೈದ್ಯರಿಗಾಗಿ ಆಕರ್ಷಕ ವಿದೇಶಿ ಪ್ರವಾಸಗಳನ್ನು ಆಯೋಜಿಸುತ್ತಿವೆ ಹಾಗೂ ಇತರ ಹಲವು ಬಗೆಯ ಆಮಿಷಗಳನ್ನು ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಈ ಕಡ್ಡಾಯ ಸಂಹಿತೆ ಹೆಚ್ಚಿನ ಮಹತ್ವ ಪಡೆದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin