ಸುಪ್ರೀಂ ಕೋರ್ಟ್’ನಲ್ಲಿಲ್ಲ ಮುಸ್ಲಿಂ ಜಡ್ಜ್ : 11 ವರ್ಷಗಳಲ್ಲಿ ಇದೇ ಮೊದಲು

ಈ ಸುದ್ದಿಯನ್ನು ಶೇರ್ ಮಾಡಿ

Supre-Court-Judgement

ನವದೆಹಲಿ, ಸೆ.6– ಸುಪ್ರೀಂಕೋರ್ಟ್‍ನ ಇಬ್ಬರು ಮುಸ್ಲಿಂ ನ್ಯಾಯಾಧೀಶರು ನಿವೃತ್ತಿಯಾಗಿರವುದರಿಂದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆ ಸಮುದಾಯದ ಓರ್ವ ನ್ಯಾಯಮೂರ್ತಿ ಇಲ್ಲದೇ ಸರ್ವೋಚ್ಚ ನ್ಯಾಯಾಲಯ ಕಾರ್ಯನಿರ್ವಹಿಸಿದೆ. ಇದು ಮೂರು ದಶಕಗಳಲ್ಲಿ ಎದುರಾಗಿರುವ ಇಂಥ ಎರಡನೇ ಪ್ರಸಂಗವಾಗಿದೆ.  2012ರಲ್ಲಿ ಸುಪ್ರೀಂಕೋರ್ಟ್‍ನ ನ್ಯಾಯಪೀಠಕ್ಕೆ ಮುಸ್ಲಿಂ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಎಂ.ವೈ.ಇಕ್ಬಾಲ್ ಮತ್ತು ಫಕೀರ್ ಇಬ್ರಾಹಿಂ ಕಾಲಿಫುಲ್ಲಾ ಅವರನ್ನು ಆ ವರ್ಷ ಕ್ರಮವಾಗಿ ಡಿಸೆಂಬರ್ ಮತ್ತು ಏಪ್ರಿಲ್‍ನಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಇವರಿಬ್ಬರು ಅನುಕ್ರಮವಾಗಿ ಫೆ.2 ಮತ್ತು ಜು.22ರಂದು ನಿವೃತ್ತರಾದರು.

ಆದರೆ, ಸುಪ್ರೀಂಕೋರ್ಟ್‍ಗೆ ನ್ಯಾಯಾಧೀಶರ ನೇಮಕಾತಿ ವಿಧಾನದ ಬಗ್ಗೆ ಸರ್ಕಾರ ಮತ್ತು ಸರ್ವೊನ್ನತ ನ್ಯಾಯಾಲಯದ ಭಿನ್ನಭಿಪ್ರಾಯದಿಂದಾಗಿ ಮುಸ್ಲಿಂ ನ್ಯಾಯಾಧೀಶರ ನೇಮಕ ವಿಳಂಬವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin