ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

anekal--doctor-blood

ಆನೇಕಲ್. ಸೆ. 06- ಯುವ ಸಮುದಾಯ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು, ಇದರಿಂದ ಮತ್ತೊಂದು ಜೀವವನ್ನು ಬದುಕಿಸಿದಂತಾಗುತ್ತದೆ ಎಂದು ಎಸ್‍ಎಫ್‍ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಕ್ರಿಸ್ಟೋಪರ್ ಕ್ರಾಸ್ಟಾ ತಿಳಿಸಿದರು.  ತಾಲ್ಲೂಕಿನ ಹೆಬ್ಬಗೋಡಿ ಸಮೀಪದ ಎಸ್‍ಎಫ್‍ಎಸ್ ಕಾಲೇಜು ಸಭಾಂಗಣದಲ್ಲಿ ದೇವರಾಜು ಅರಸರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಬಾಗವಹಿಸಿ ಮಾತನಾಡಿದರು.ರಕ್ತದಾನದಿಂದ ಸಾವಿನ ದವಡೆಯಿಂದ ಪಾರು ಮಾಡಬಹುದಾಗಿದ್ದು, ರಕ್ತದಾನ ಎಲ್ಲಾ ದಾನಗಳಿಗಿಂತಲೂ ಮಿಗಿಲಾಗಿದ್ದು, ಯುವ ಜನಾಂಗ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ರಕ್ತದಾನ, ತ್ಯಾಗದ ಗುಣಗಳು ಯುವ ಜನಾಂಗದಲ್ಲಿ ಕಾಣದಾಗಿರುವುದು ವಿಷಾದನೀಯ ಎಂದು ಹೇಳಿದರು.ಎಸ್‍ಎಫ್‍ಎಸ್ ಕಾಲೇಜಿನ ಎನ್‍ಎಸ್‍ಎಸ್, ಎನ್‍ಸಿಸಿ ಕರ್ನಾಟಕ ಪೌರ ರಕ್ಷಣಾದಳ, ರೆಡ್ ಕ್ರಾಸ್ ಘಟಕ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆ, ನಾರಾಯಣ ನೇತ್ರಾಲಯ ಹಾಗೂ ಹೃದಯಾಲಯಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ರೆಡ್ ಕ್ರಾಸ್ ಘಟಕದ ಸಂಯೋಜನಾ ಅಧಿಕಾರಿ ಡಾ.ಶ್ರೀನಿವಾಸ್, ಸೆಂಟ್ ಜಾನ್ಸ್ ಕಾಲೇಜಿನ ಡಾ.ಪರಿಮಳ, ನಾರಾಯಣ ಹೃದಯಾಲಯದ ನವೀನ್ ಕುಮಾರ್, ಲೆಫ್ಟಿನೆಂಟ್ ಸಂಪತ್ ಕುಮಾರ್, ಮಂಜುನಾಥ ದೇವು, ಮುನಿರಾಜು, ಕಿರಣ್ ರೆಡ್ಡಿ, ಮಂಜುನಾಥ್, ಕರಿ ಬಸವನಗೌಡ ಮತ್ತಿತರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin