ಮಹಿಳೆಯರು ಬುರ್ಖಾ ಧರಿಸದಂತೆ ನಿಷೇಧ ಹೇರಿದ ಐಸಿಸ್

ಈ ಸುದ್ದಿಯನ್ನು ಶೇರ್ ಮಾಡಿ

ISIS

ಬಾಗ್ದಾದ್, ಸೆ.7-ಇರಾಕ್ ನಗರದ ಮೊಸುಲ್‍ನಲ್ಲಿ ಮಹಿಳೆಯರು ಬುರ್ಖಾ ಧರಿಸದಂತೆ ಐಸಿಸ್ ನಿಷೇಧ ಹೇರಿದೆ.  ಬುರ್ಖಾ ಧರಿಸಿದ್ದ ಮಹಿಳೆ, ಇಬ್ಬರು ಪ್ರಮುಖ ಜಿಹಾದಿ ಮುಖಂಡರನ್ನು ಪಿಸ್ತೂಲ್ ನಿಂದ ಹೊಡೆದುರುಳಿಸಿದ್ದಳು. ಇದರ ಬೆನ್ನಲ್ಲೇ ದಿ ಬುರ್ಖಾ ಅನ್ನೋ ಉಗ್ರ ಸಂಘಟನೆ ನಿಷೇಧ ಹೇರಿದೆ. ಕಪ್ಪು ದುಪ್ಪಟ್ಟಾ ಧರಿಸುತ್ತಿಲ್ಲ ಎಂಬ ಕಾರಣಕ್ಕೆ ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಪಾತಕಿಗಳು ಮಹಿಳೆಯರ ಮೇಲೆ ಹಲ್ಲೆ ನಡೆಸ್ತಾ ಇದ್ರು, ಅವರನ್ನು ಹತ್ಯೆ ಮಾಡ್ತಾ ಇದ್ರು. ಸೆಕ್ಯೂರಿಟಿ ಸೆಂಟರ್ ಹೊರತುಪಡಿಸಿ ಮೊಸುಲ್‍ನ ಉಳಿದೆಡೆ ಈಗಲೂ ಕಪ್ಪು ವೇಲ್ ಧರಿಸುವುದು ಕಡ್ಡಾಯ.

ಇದೇ ರೀತಿಯ ವೇಲ್ ತೊಟ್ಟಿದ್ದ ಮಹಿಳೆಯೊಬ್ಬಳು ಚೆಕ್ ಪಾಯಿಂಟ್‍ನಲ್ಲಿ ನಿಂತಿದ್ದ ಇಬ್ಬರು ಪ್ರಮುಖ ಉಗ್ರರನ್ನು ಫಿನಿಶ್ ಮಾಡಿದ್ದಾಳೆ. ಭವಿಷ್ಯದಲ್ಲಿ ಇಂತಹ ದಾಳಿಗಳು ಮತ್ತೆ ಮತ್ತೆ ನಡೆಯುವ ಸಾಧ್ಯತೆಯಿದ್ದು, ಐಸಿಸ್ ಫುಲ್ ಅಲರ್ಟ್ ಆಗಿದೆ. ಐಸಿಸ್ ಕಪಿಮುಷ್ಠಿಯಲ್ಲಿದ್ದ ಮಹಿಳೆಯರಿಗೆಲ್ಲ ಈ ಮೊದಲು ಬುರ್ಖಾ ಧರಿಸುವಂತೆ ಒತ್ತಡ ಹೇರಲಾಗ್ತಾ ಇತ್ತು. ಕೆಲ ದಿನಗಳ ಹಿಂದಷ್ಟೆ ಭಯೋತ್ಪಾದಕರಿಂದ ಪಾರಾಗಿ ಬಂದ ಮಹಿಳೆಯರು ತಮ್ಮ ಬುರ್ಖಾವನ್ನು ಸುಟ್ಟು ಹಾಕಿ ಸಂಭ್ರಮಾಚರಣೆ ಮಾಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin