ತೆರಿಗೆ ಕಟ್ಟದೆ ಸತಾಯಿಸುತ್ತಿದೆ ವಿಮಾನ ನಿಲ್ದಾಣ ಆಡಳಿತ ಮಂಡಳಿ

ಈ ಸುದ್ದಿಯನ್ನು ಶೇರ್ ಮಾಡಿ

kempegowda

ಬೆಂಗಳೂರು, ಸೆ.8-ರಾಜ್ಯ ರಾಜಧಾನಿ ಬೆಂಗಳೂರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಿರಿಮೆ ಹಾಗೂ ಹೆಗ್ಗಳಿಕೆ ತಂದುಕೊಟ್ಟಿದೆ. ಆದ್ರೆ ವಿಮಾನ ನಿಲ್ದಾಣ ಪ್ರಾಕಾರ ಮಾತ್ರ ಸ್ಥಳೀಯ ಸಂಸ್ಥೆಗೆ ಕೋಟ್ಯಾಂತರ ರೂ. ತೆರಿಗೆ ಕಟ್ಟದೆ ಸತಾಯಿಸುತ್ತಾ ಬಂದಿದೆ.  ಕಳೆದ ನಾಲ್ಕು ವರ್ಷಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣ ಗ್ರಾಮ ಪಂಚಾಯ್ತಿಗೆ ತೆರಿಗೆಯೇ ಪಾವತಿಸದೆ ಸತಾಯಿಸುತ್ತಿದೆ. ವಿಮಾನ ನಿಲ್ದಾಣ ಪ್ರಾಕಾರದ ನಿರ್ಲಕ್ಷ್ಯತನದ ವಿರುದ್ಧ ಗ್ರಾಮ ಪಂಚಾಯ್ತಿಯ ಸದಸ್ಯರು ಆಕ್ರೋಶಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

2005 ರಲ್ಲಿ ದೇವನಹಳ್ಳಿ ಬಳಿ ಕಾಮಗಾರಿ ಪ್ರಾರಂಭಿಸಿದ ವಿಮಾನ ನಿಲ್ದಾಣ ಪ್ರಾಕಾರ ದೇವನಹಳ್ಳಿಯ ಅಣ್ಣೇಶ್ವರ ಪಂಚಾಯಿತಿ ವ್ಯಾಪ್ತಿಯ ಜಮೀನುಗಳನ್ನು ಸ್ವಾನಪಡಿಸಿಕೊಂಡಿತು. ಪಂಚಾಯತ್ ರಾಜ್ ಅನಿಯಮದ ಅನ್ವಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯ್ತಿಗೆ ಕೆಂಪೇಗೌಡ ಏರ್‌ಪೋರ್ಟ್ ವರ್ಷಕ್ಕೆ ನಾಲ್ಕು ಕೋಟಿ ಎಂಬತ್ತೇಳು ಲಕ್ಷ ಕಂದಾಯ ಕಟ್ಟಬೇಕೆಂದು ನಿಗದಿಪಡಿಸಿದೆ.   ವಿಮಾನ ನಿಲ್ದಾಣ ಆರಂಭವಾದ 2010 ರಿಂದ ಇದುವರೆಗೆ ಕೇವಲ 7 ಕೋಟಿ 31 ಲಕ್ಷ ಮಾತ್ರ ಕಂದಾಯ ಪಾವತಿ ಮಾಡಿದೆ. ಆದ್ರೆ ನಾಲ್ಕು ವರ್ಷಗಳಿಂದ ಕಂದಾಯವನ್ನು ಬಾಕಿ ಉಳಿಸಿಕೊಂಡಿರುವ ವಿಮಾನ ನಿಲ್ದಾಣ ಪ್ರಾಕಾರ ಸುಮಾರು 26 ಕೋಟಿ 82 ಲಕ್ಷ ಪಾವತಿ ಮಾಡದೆ ಗ್ರಾಮ ಪಂಚಾಯ್ತಿಗೆ ಸತಾಯಿಸುತ್ತಿದೆ. ಅಲ್ಲದೆ ಇದೀಗ ಪಾವತಿ ಮಾಡಬೇಕಾಗಿರುವ ಕಂದಾಯಕ್ಕೆ ಬಡ್ಡಿಯು ಸೇರಿದ್ರೆ ಸುಮಾರು 28 ಕೋಟಿ 91 ಲಕ್ಷ ಕಂದಾಯವನ್ನು ನೀಡಬೇಕಾಗುತ್ತದೆ. ಆದರೆ ಏರ್‌ಪೋರ್ಟ್‌ನ ಅಕಾರಿಗಳಿಗೆ ಎಷ್ಟು ಬಾರಿ ತಿಳಿಸಿದರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಆರೋಪಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿ.ಪಂ ಸಿಇಒ ಕೂಡ ಗ್ರಾ.ಪಂ.ಗೆ ಕಟ್ಟಬೇಕಾದ ಶೇ.50 ತೆರಿಗೆ ಪಾವತಿ ಮಾಡುವಂತೆ ಏರ್‌ಪೋರ್ಟ್ ಪ್ರಾಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಏರ್‌ಪೋರ್ಟ್ ಪ್ರಾಕಾರವೂ ಗ್ರಾ.ಪಂ ನಿಗದಿ ಮಾಡಿರುವ ದುಬಾರಿ ತೆರಿಗೆಯನ್ನು ಕಟ್ಟಲು ಸಾಧ್ಯವಿಲ್ಲ ಅಂತ ಹೈಕೋರ್ಟ್‌ಗೆ ಅರ್ಜಿ ಹಾಕಿದೆ.

ಏರ್‌ಪೋರ್ಟ್ ಪ್ರಾಕಾರ ಸಲ್ಲಿಸಿದ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಮೊದಲು ಜಿ.ಪಂ ಆದೇಶ ಪಾಲಿಸಿ ನಂತರ ಬರುವಂತೆ ಏರ್‌ಪೋರ್ಟ್ ಪ್ರಾಕಾರಕ್ಕೆ ಸೂಚಿಸಿದೆ. ಹೀಗಿದ್ದರೂ ಏರ್‌ಪೋರ್ಟ್ ಪ್ರಾಕಾರ ತೆರಿಗೆ ಪಾತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. 15 ದಿನದೊಳಗೆ ಗ್ರಾ.ಪಂ.ಗೆ ಬರಬೇಕಾಗಿರುವ ತೆರಿಗೆಯನ್ನು ಕಟ್ಟದೇ ಹೋದರೆ ವಿಮಾನ ನಿಲ್ದಾಣದಲ್ಲಿ ತಮಟೆ ಚಳುವಳಿ ಮಾಡುವುದಾಗಿ ಗ್ರಾ.ಪಂ. ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin