ಬಕ್ರೀದ್ ರಜೆ ಸೆ.12ಕ್ಕಲ್ಲ 13ಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Bakrid

ಬೆಂಗಳೂರು ಸೆ 08: ಬಕ್ರೀದ್ ಹಬ್ಬದ ರಜೆಯನ್ನು ಸೆಪ್ಟೆಂಬರ್ 12ರ ಬದಲಿಗೆ ಸೆ.13ಕ್ಕೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. 2016ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಬಕ್ರೀದ್ ಹಬ್ಬದ ರಜೆ ಸೆಪ್ಟೆಂಬರ್ 12ಕ್ಕೆ ನಿಗದಿಯಾಗಿತ್ತು. ಇದೀಗ ಸೆ.12ರ ಬದಲಿಗೆ ಸೆ.13ಕ್ಕೆ ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  ಸಾರ್ವಜನಿಕರ ಅನುಕೂಲಕ್ಕಾಗಿ ರಜಾ ದಿನವನ್ನು ಬದಲಾಯಿಸಬೇಕು ಎಂದು ಕೇಂದ್ರ ಚಂದ್ರದರ್ಶನ ಸಮಿತಿ ಮನವಿ ಮಾಡಿದ್ದರಿಂದ ರಜಾ ದಿನವನ್ನು ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin