ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ramanagara

ರಾಮನಗರ, ಸೆ.9- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.ಜಯಲಲಿತಾ ವೇಷ ಧರಿಸಿದ ಕಾರ್ಯಕರ್ತನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೇಷ ಧರಿಸಿದ ವ್ಯಕ್ತಿಗೆ ತಾಳಿ ಕಟ್ಟಿಸಿ ಪುರೋಹಿತಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ವೇಷ ಧರಿಸಿದ ವ್ಯಕ್ತಿ ನೆರವೇರಿಸಿದ್ದು ವಿಶೇಷವಾಗಿತ್ತು.ಈ ಮೂಲಕ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂಘಟನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾವೇರಿ ನಮ್ಮದು, ಅದನ್ನು ಎಲ್ಲಿಗೂ ಬಿಡುವುದಿಲ್ಲ. ಪ್ರಾಣ ಬಿಟ್ಟೇವು, ಆದರೆ, ನೀರು ಕೊಡೆವು ಎಂದು ಘೋಷಣೆ ಕೂಗಿದರು.ನಗರದಲ್ಲಿ ಪಕ್ಷ, ಜಾತಿ , ಧರ್ಮ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಬಂದ್ ಯಶಸ್ವಿಗೊಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin