ಸೂರ್ಯ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

CHINTAMANI

ಚಿಂತಾಮಣಿ, ಸೆ.9- ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಗರದ ಹೊರವಲಯದಲ್ಲಿರುವ ಸೂರ್ಯ ಶಾಲೆಯ ವಿದ್ಯಾರ್ಥಿಗಳು ನಾಲ್ಕು ಬಹುಮಾನಗಳನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀಮಹೇಶ್ ತಿಳಿಸಿದ್ದಾರೆ.ಪ್ರಾಥಮಿಕ ಶಾಲಾ ವಿಭಾಗದ ಇಂಗ್ಲೀಷ್ ಕಂಠ ಪಾಠ ಸ್ಪರ್ಧೆಯಲ್ಲಿ ಎಸ್.ಹರ್ಷಿತ (ಪ್ರಥಮ), ಹಿರಿಯ ಪ್ರಾಥಮಿಕ ವಿಭಾಗದ ಲಘುಸಂಗೀತದಲ್ಲಿ ಜಿ.ಕಲ್ಯಾಣ್ ಕುಮಾರ್ (ಪ್ರಥಮ), ಆರೇಬಿಕ್ ಧಾರ್ಮಿಕ ಪಠಣದಲ್ಲಿ ಸೈಯದ್ ಕಾಸಿಫ್ (ತೃತೀಯ) ಹಾಗೂ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಏಂಜಲ್‍ರಾಜ್ ತೃತೀಯ ಸ್ಥಾನವನ್ನು ಪಡೆದಿದ್ದಾರೆಂದು ಅವರು ವಿವರಿಸಿದ್ದಾರೆ.ವಿಜೇತ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರಾದ ಅಶ್ವಿನಿ, ಸುಮಲತ, ರೂಪ, ಅರುಣರವರುಗಳನ್ನು ಮುಖ್ಯಶಿಕ್ಷಕ ಶಿ.ಮ.ಮಂಜುನಾಥ ರವರು ಅಭಿನಂದಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin