ಬಂದ್ ವೇಳೆ ಮಾಡಿದ್ದ ಲಾಠಿ ಚಾರ್ಜ್ ಖಂಡಿಸಿ ವಾಟಾಳ್ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

vatal

ಬೆಂಗಳೂರು, ಸೆ.10-ತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ನಿನ್ನೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಇಂದು ಕೆಆರ್‌ಎಸ್ ಬಳಿ ಕನ್ನಡ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.  ಕನ್ನಡ ಒಕ್ಕೂಟದ ಮುಖಂಡರಾದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದ್, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕರವೇ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ , ಗಿರಿಗೌಡ, ಸಾರ್ವಜನಿಕ ಜಾಗೃತಿ ವೇದಿಕೆಯ ಸೋಮು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಇಂದು ಕೆಆರ್‌ಎಸ್ ಬಳಿ ಸತ್ಯಾಗ್ರಹ ನಡೆಸಿ ಪೊಲೀ ಸರ ಲಾಠಿಚಾರ್ಜ್ ಕ್ರಮವನ್ನು ಖಂಡಿಸಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಒತ್ತಾಯಿಸಿದರು.

ಮಳೆ ಇಲ್ಲದೆ ಕಾವೇರಿ ಜಲಾಶಯಗಳಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಸುಪ್ರೀಂ  ಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದೆ. ನಮ್ಮ ರಾಜ್ಯದ ರೈತರ ಬೆಳೆಗಳಿಗೆ ನೀರಿಲ್ಲ. ಕುಡಿಯಲು ನೀರಿಲ್ಲ, ಜನಜಾನುವಾರುಗಳಿಗೆ ಸಂಕಷ್ಟವಿರುವ ಸಂದರ್ಭದಲ್ಲಿ ನೀರು ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಒಗ್ಗಟ್ಟು ಪ್ರದರ್ಶಿಸಲು ಕನ್ನಡ ಒಕ್ಕೂಟ ಕರೆ ಕೊಟ್ಟಿದ್ದ ಬಂದ್‌ಗೆ ಇಡೀ ರಾಜ್ಯ ಸ್ಪಂದಿ ಸಿತ್ತು. ಇದಕ್ಕೆ ಒಕ್ಕೂಟದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ವಾಟಾಳ್ ತಿಳಿಸಿದರು.
ಸೆ.16ರವರೆಗೆ ಸುಪ್ರೀಂಕೋರ್ಟ್ ನೀರು ಬಿಡುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಮೇಲ್ಮನವಿ ಅರ್ಜಿ ಸಲ್ಲಿಸಿ ಆದೇಶವನ್ನು ಮರು ಪರಿಶೀ ಲಿಸುವಂತೆ ಕೋರಬೇಕು, ಅಲ್ಲಿಯವರೆಗೂ ನಾವು ವಿವಿಧ ಹಂತಗಳಲ್ಲಿ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು. ಸಾ.ರಾ.ಗೋವಿಂದ್ ಮಾತನಾಡಿ, ನಮ್ಮ ಒಕ್ಕೂಟ ಕರೆ ಕೊಟ್ಟಿದ್ದ ಬಂದ್‌ಗೆ ಸ್ಪಂದಿಸಿದ್ದಕ್ಕೆ ರಾಜ್ಯದ ಎಲ್ಲ ಜನತೆಗೆ ಅಭಾರಿಯಾಗಿದ್ದೇವೆ. ಇದೇ ರೀತಿ ನೆಲಜಲ ವಿಷಯದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ. ಇದೇ ರೀತಿ ಕಾವೇರಿ, ಮಹದಾಯಿ ವಿಷಯದಲ್ಲೂ ಕೂಡ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಿದ್ದಾರೆ. ನ್ಯಾಯ ದಾನ ಪ್ರಕ್ರಿಯೆಯಲ್ಲಿ ನಮಗೆ ವಿಳಂಬವಾಗಿರ ಬಹುದು. ಆದರೆ ನಮ್ಮ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರೆಯಲಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin