ಮತ್ತೊಂದು ಬಂದ್..! : ಸೆಪ್ಟಂಬರ್ 15 ರಂದು ರಾಜ್ಯದಲ್ಲಿ ರೈಲ್ವೇ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj

ಮಂಡ್ಯ ಸೆ.10 ಈಗಷ್ಟೇ ಬಂದ್ ಎಫೆಕ್ಟ್ ನಿಂದ ಹೊರಬರುವ ಮುನ್ನವೇ ಮತ್ತೊಂದು ಬಂದ್ ಬಿಸಿ ಎದುರಾಗುವ ಸಂಭವವಿದೆ. ಕಾವೇರಿ ನದಿ ನೀರಿನ ಕುರಿತಾದ ಹೋರಾಟವನ್ನು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿದ್ದು, ಸೆಪ್ಟಂಬರ್ 15 ರಂದು ರೈಲ್ವೇ ಬಂದ್ ಗೆ ಕರೆ ನೀಡಿವೆ.  ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನದಿ ನೀರನ್ನು ಹರಿಸುವುದನ್ನು ನಿಲ್ಲಿಸಬೇಕೆಂದು ಸೆಪ್ಟಂಬರ್ 9 ರಂದು ನಡೆಸಿದ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ಹೋರಾಟದ ಬಗ್ಗೆ ದೇಶದ ಮತ್ತು ಸುಪ್ರೀಂ ಕೋರ್ಟ್ ಗಮನ ಸೆಳೆಯುವ ಉದ್ದೇಶದಿಂದ ಸೆಪ್ಟಂಬರ್ 15 ರಂದು ರಾಜ್ಯಾದ್ಯಂತ ರೈಲು ಸಂಚಾರಕ್ಕೆ ತಡೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಾಜ್ಯದಲ್ಲಿ ರೈಲು ಸಂಚಾರ ಬಂದ್ ಮಾಡಲಾಗುವುದು. ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin