ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಎಂಬ್ರಾಯಿರ್ ಜೆಟ್ ಖರೀದಿ ಹಗರಣದ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

Jet

ನವದೆಹಲಿ, ಸೆ.10-ಯುಪಿಎ ಸರ್ಕಾರದ ಆಡಳಿತದಲ್ಲಿ ನಡೆದಿದೆ ಎನ್ನಲಾದ 208 ದಶಲಕ್ಷ ಡಾಲರ್ ಮೊತ್ತದ ಎಂಬ್ರಾಯಿರ್ ಜೆಟ್ ಖರೀದಿ ಲಂಚ ಹಗರಣದ ಬಗ್ಗೆ ಅಮೆರಿಕ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಗುತ್ತಿಗೆಯನ್ನು ಪಡೆಯಲು ದೊಡ್ಡ ಮಟ್ಟದಲ್ಲಿ ಲಂಚರುಷುವತ್ತುಗಳು ನಡೆದಿವೆ ಎಂಬ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ. ಬ್ರೆಜಿಲ್ ವಿಮಾನ ತಯಾರಿಕೆ ಸಂಸ್ಥೆ ಎಂಬ್ರಾಯಿರ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ನಡುವೆ 2008ರಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ವಾಯು ಮಾರ್ಗ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಗಾಗಿ ದೇಶೀಯ ರೆಡಾರ್‍ಗಳೊಂದಿಗೆ ಸುಸಜ್ಜಿತವಾದ ಮೂರು ಎಂಬ್ರಾಯಿರ್ ವಿಮಾನಗಳ ಖರೀದಿ ಗುತ್ತಿಗೆ ಕುದುರಿಸಲು ಭಾರೀ ಲಂಚ ವ್ಯವಹಾರ ನಡೆದಿದೆ ಎಂದು ಆರೋಪಗಳ ಹಿನ್ನೆಲೆಯಲ್ಲಿ ಬ್ರೆಜಿಲ್ ಸಂಸ್ಥೆಯು ಡಿಆರ್‍ಡಿಒಗೆ ಲಂಚ ನೀಡಿದೆಯೇ ಎಂಬ ಬಗ್ಗೆ ಅಮೆರಿಕ ತನಿಖೆ ಚುರುಕುಗೊಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin