ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಹಲ್ಲೆ : ನೊಂದ ಯುವಕ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

poison--suicide

ಅರಕಲಗೂಡು,ಸೆ.10-ಯುವತಿಯೊಬ್ಬಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಮನೆಗೆ ಬಿಟ್ಟ ಯುವಕನ ಮೇಲೆ ಹಲ್ಲೆ ನಡೆಸಿ, ಹಿಯಾಳಿಸಿದ ಹಿನ್ನೆಲೆಯಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ನಡೆದಿದೆ.  ಶರಣ(18) ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಕಳೆದ ಎರಡು ದಿನಗಳ ಹಿಂದೆ ತನ್ನ ಗ್ರಾಮದ ಯುವತಿಯೊಬ್ಬಳನ್ನು ಬಸ್ ಸ್ಟ್ಯಾಂಡ್‍ನಿಂದ ಕರೆದುಕೊಂಡು ಬಂದಿದ್ದ. ಇದನ್ನು ನೋಡಿದ ಯುವತಿ ಮನೆಯವರು ಏಕಾಏಕಿ ಆತನ ಮೇಲೆ ಹಲ್ಲೆಗೆ ಮುಂದಾದರು.

ಇದನ್ನು ಬಿಡಿಸಲು ಬಂದ ಶರಣನ ತಂದೆ ಮೇಲೂ ಹಲ್ಲೆ ನಡೆಸಿ, ಮನಬಂದಂತೆ ಹಿಯಾಳಿಸಲಾಗಿತ್ತು. ಇದರಿಂದ ನೊಂದಿದ್ದ ಶರಣ ನಿನ್ನೆ ರಾತ್ರಿ ವಿಷ ಸೇವಿಸಿದ್ದಾನೆ. ಇದನ್ನರಿತ ಪೋಷಕರು  ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin