ಶಿಕ್ಷಕ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕ : ಮೇಟಿ

ಈ ಸುದ್ದಿಯನ್ನು ಶೇರ್ ಮಾಡಿ

belagam1

ಮುದ್ದೇಬಿಹಾಳ,ಸೆ.10- ಶಿಕ್ಷಕರು ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವ ಮಾರ್ಗದರ್ಶಕರು ಎಂದು ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಹೇಳಿದರು.ತಾಲೂಕಿನ ಆಲೂರ ಗ್ರಾಮದಲ್ಲಿ ಗುರುವಾರ ಓಂ ಗಣೇಶ ಗೆಳೆಯರ ಬಳಗದವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕನ ಹಿಂದೆ ಗುರುವೊಬ್ಬರು ಇದ್ದಾರೆ. ಆಧ್ಯಾತ್ಮಿಕ, ರಾಜಕೀಯ, ಸಂಗೀತ, ಸಾಹಿತ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಗುರುವಿನ ಮಾರ್ಗದರ್ಶನ ಬೇಕು. ಎಲ್ಲೋ ಒಬ್ಬರು ಮಾಡುವ ತಪ್ಪಿಗೆ ಇಡೀ ಶಿಕ್ಷಕ ಸಮುದಾಯವನ್ನು ದೂಷಿಸುವ ಪ್ರವೃತ್ತಿ ಸಲ್ಲದು. ಶಿಕ್ಷಕರೂ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಂಡರೆ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದರು.
ಶಿಕ್ಷಣ ಸಂಯೋಜಕ ರುದ್ರೇಶ ಕಿತ್ತೂರ ಮಾತನಾಡಿ, ಅಕ್ಷರ ಕಲಿಸಿದ ಗುರುಗಳನ್ನು ಮರೆಯದೇ ನೆನಪಿಸಿ ಗೌರವಿಸಿರುವ ಆಲೂರ ಗ್ರಾಮದ ಶಿಷ್ಯರ ಕಾರ್ಯ ಶ್ಲಾಘನೀಯವಾಗಿದ್ದು ಯುವಕರು ದುಶ್ಚಟಗಳ ದಾಸರಗಾದೇ ಸನ್ಮಾರ್ಗದಲ್ಲಿ ಮುನ್ನಡೆದರೆ ಇವರು ನಮ್ಮ ಶಿಷ್ಯ ಎಂದು ಹೇಳಿಕೊಳ್ಳಲು ಗುರುವಿಗೆ ಹೆಮ್ಮೆ ಎನಿಸುತ್ತದೆ ಎಂದರು.ಬಿಲ್‍ಕೆರೂರಿನ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.ಗ್ರಾ.ಪಂ ಅಧ್ಯಕ್ಷೆ ರೇಖಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ಪ್ರಭಾರಿ ಬಿಇಓ ಎಂ.ಎಂ. ಬೆಳಗಲ್, ತಾಪಂ ಸದಸ್ಯೆ ಲತಾ ಗೂಳಿ, ಗ್ರಾ.ಪಂ ಸದಸ್ಯರಾದ ಸಂಗಪ್ಪ ಜಗ್ಗಲ, ಮಹಾಂತೇಶ ಬೂದಿಹಾಳ, ವಿಶಾಲಕುಮಾರ ಬಿರಾದಾರ, ಶಾಂತಾ ಬಿರಾದಾರ, ಜಿ.ಎಚ್.ಪಾಟೀಲ ಮತ್ತಿತರರು ಇದ್ದರು. ರಾಘವೇಂದ್ರ ಜೋಷಿ ಪ್ರಾರ್ಥಿಸಿದರು. ರಾಘವೇಂದ್ರ ಗೂಳಿ ಹಾಗೂ ಆರ್.ಎಂ. ಬಂಟನೂರ ನಿರೂಪಿಸಿದರು.
ಸನ್ಮಾನ :
ಮಾಜಿ ಸೈನಿಕರಾದ ಶಂಕರಗೌಡ ಪೊಲೀಸ ಪಾಟೀಲ, ದೊಡ್ಡಪ್ಪ ಬಿರಾದಾರ, ಮಹ್ಮದಲಿ ಉಪನಾಳ, ಭಾಷಾಸಾಬ ಹುನಗುಂದ, ಬಸನಗೌಡ ಪಾಟೀಲ, ನಿವೃತ್ತ ಶಿಕ್ಷಕರಾದ ಎ.ಎಂ.ಗೂಳಿ, ಸಿ.ಐ.ಗೂಳಿ, ಸಿ.ಬಿ.ಬಿರಾದಾರ, ಎಸ್.ಆರ್.ಹಿರೇಮಠ, ಎಚ್.ಆರ್.ಬೀಳಗಿ, ಶಾಂತಪ್ಪ ಕಪನೂರ, ಚನ್ನಪ್ಪ ಬಿರಾದಾರ, ಪಿ.ಬಿ.ಪಾಟೀಲ, ಬಿ.ಬಿ.ಪಾಟೀಲ, ಎಂ.ಬಿ.ಬಿರಾದಾರ, ಎಂ.ಆರ್.ಬೆಳಗಲ್, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿ.ಎಚ್.ಪಾಟೀಲ, ಎಸ್.ಎಸ್.ಕವಡಿಮಟ್ಟಿ, ಎಸ್.ಎಂ.ವಗ್ಗರ, ಕುಮಾರ ಸರ್, ಹಾದಿಮನಿ ಸರ್, ಪಿ.ಎ.ವಾಲೀಕಾರ, ಎಸ್.ಸಿ.ಕೂಡಗಿ, ಬಿ.ಎಚ್.ಭಗವತಿ, ಎಂ.ಎ.ಹೊನವಾಡ, ಟಿ.ಎಸ್.ಬಾರಾಣೆ, ಜಂಗೀನ ಮೇಡಂ, ಬಡಿಗೇರ ಮೇಡಂ,ಅಥಣಿ ಸರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಓಂ ಗಣೇಶ ಗೆಳೆಯರ ಬಳಗದ ಸದಸ್ಯರು ಶಿಕ್ಷಕರ ಪಾದ ಮುಟ್ಟಿ ಆಶೀರ್ವಾದ ಪಡೆದುಕೊಂಡದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin