ಉ.ಕೊರಿಯಾಗೆ ಅಣು ಬಾಂಬ್ ತಂತ್ರಜ್ಞಾನ ರವಾನಿಸಿದ್ದು ಪಾಕ್…!

ಈ ಸುದ್ದಿಯನ್ನು ಶೇರ್ ಮಾಡಿ

Pakistan

ನವದೆಹಲಿ, ಸೆ.12- ಭಯೋತ್ಪಾದನೆ ಮೂಲಕ ಏಷ್ಯಾ ಪ್ರಾಂತ್ಯದಲ್ಲಿ ಆತಂಕ ಸೃಷ್ಟಿಸಿರುವ ಪಾಕಿಸ್ತಾನದ ಮತ್ತೊಂದು ಭಯಾನಕ ಮುಖ ಬಯಲಾಗಿದೆ. ಸರಣಿ ಅಣು-ಬಾಂಬ್ ಪರೀಕ್ಷೆಗಳ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾಗೆ ಮಾರಕ ಅಣ್ವಸ್ತ್ರ ತಂತ್ರಜ್ಞಾನವನ್ನು ರವಾನಿಸಿದ್ದು ಇದೇ ಪಾಕಿಸ್ತಾನ ಎಂಬ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.   ಏಷ್ಯಾದ ನೆರೆಹೊರೆ ದೇಶಗಳ ಮೇಲೆ ಅದರಲ್ಲೂ ಮುಖ್ಯವಾಗಿ ಕಡು ವೈರಿಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಮೇಲೆ ಅಣ್ವಸ್ತ್ರ ದಾಳಿ ನಡೆಸುವ ತನ್ನ ಸಾಮಥ್ರ್ಯವನ್ನು ಉತ್ತರ ಕೊರಿಯಾ ಮೊನ್ನೆ ಜಗಜ್ಜಾಹೀರು ಮಾಡಿತ್ತು. ಅಣು-ಬಾಂಬ್ ಪರೀಕ್ಷೆ ನಂತರ ಪಾಕಿಸ್ತಾನದ ಮೇಲೆ ಒಂದೆಡೆ ಅಮೆರಿಕದ ಆಕ್ರೋಶ ಹೆಚ್ಚಾಗಿದ್ದರೆ, ಇನ್ನೊಂದೆಡೆ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನದ ಇಬ್ಬಗೆ ನೀತಿಗೆ ಏಷ್ಯಾ ರಾಷ್ಟ್ರಗಳಲ್ಲಿ ತೀವ್ರ ಅಸಮಾಧಾನ ಭುಗಿಲೆದಿದ್ದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಜೊತೆಗಿನ ಸಂಬಂಧಗಳನ್ನು ಕಡಿತಗೊಳಿಸುವ ಬಗ್ಗೆ ಈ ದೇಶಗಳು ಗಂಭೀರ ಚಿಂತನೆ ನಡೆಸಿವೆ ಎಂದು ವಾಷಿಂಗ್ಟನ್ ಫೋಸ್ಟ್ ವರದಿ ಮಾಡಿದೆ.

1990ರಲ್ಲಿ ಮಾರಕ ಅಣ್ವಸ್ತ್ರ ತಂತ್ರಜ್ಞಾನವನ್ನು ಪಡೆಯಲು ಪಾಕಿಸ್ತಾನದ ಉನ್ನತ ಸೇನಾಧಿಕಾರಿಗಳಿಗೆ ಉತ್ತರ ಕೊರಿಯಾ ಲಂಚ ನೀಡಿದೆ ಎಂಬ ಸ್ಫೋಟಕ ಸತ್ಯವನ್ನು ಪಾಕ್‍ನ ಅಣು-ಬಾಂಬ್ ಸಂಸ್ಥಾಪಕ ಅಬ್ದುಲ್ ಖಾದೀರ್ ಖಾನ್ 2011ರಲ್ಲಿ ಬಹಿರಂಗಗೊಳಿಸಿದ ಸಂಗತಿಯನ್ನು ವಾಷಿಂಗ್ಟನ್ ಫೋಸ್ಟ್ ವರದಿ ವರದಿ ಮಾಡಿದೆ.   ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಚ್ಚರಿಕೆ ನಡುವೆಯೂ ಈವರೆಗೆ ಐದು ಅಪಾಯಕಾರಿ ಅಣು-ಬಾಂಬ್ ಪರೀಕ್ಷೆಗಳನ್ನು ನಡೆಸಿ ಏಷ್ಯಾ ಪಾಂತ್ರದಲ್ಲಿ ಕಳವಳಕಾರಿ ವಾತಾವರಣ ಉಂಟು ಮಾಡಿರುವ ಉತ್ತರ ಕೊರಿಯಾಗೆ ಪಾಕ್‍ನಿಂದ ಅಣ್ವಸ್ತ್ರ ತಂತ್ರಜ್ಞಾನ ರವಾನೆಯಾಗಿರುವುದನ್ನು ವರದಿ ಖಚಿತಪಡಿಸಿದೆ.

ಸಿಯೋಲ್ ವರದಿ :
ಈ ನಡುವೆ, ಯಾವುದೇ ಸಮಯದಲ್ಲಿ ಇನ್ನೊಂದು ಅಣ್ವಸ್ತ್ರ ಪರೀಕ್ಷೆ ನಡೆಸಲು ಉತ್ತರ ಕೊರಿಯಾ ಸಿದ್ಧವಾಗಿದ್ದು, ಇದಕ್ಕಾಗಿ ಭಾರೀ ಎಂದು ಉತ್ತರ ಕೊರಿಯಾದ ರಕ್ಷಣಾ ಸಚವಾಲಯದ ವಕ್ತಾರ ಮೂನ್ ಸ್ಯಾಂಗ್-ಗ್ಯುಯಿನ್ ಇಂದು ಆತಂಕ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin