ಕನ್ನಡಿಗರ ಮೇಲೆ ಹಲ್ಲೆ : ತಮಿಳಿಗರನ್ನು ಇಲ್ಲಿಂದ ಓಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

Tamil

ಚೆನ್ನೈ,ಸೆ.12-ತಮಿಳುನಾಡಿನ ರಾಮೇಶ್ವರದಲ್ಲಿ ಕನ್ನಡಿಗರ ಮೇಲೆ ತಮಿಳು ಪುಂಡರು ಹಲ್ಲೆ ನಡೆಸಿದ್ದಾರೆ. ಅಲ್ಲಿನ ಕನ್ನಡಿಗರ ಮನೆಗಳಿಗೆ ನುಗ್ಗಿ ದೌರ್ಜನ್ಯ ಮತ್ತು ಮನಬಂದಂತೆ ಥಳಿಸಿ ಕಾವೇರಿ ತಮಿಳಿಗರದು ಎಂದು ಹೇಳುವಂತೆ ಒತ್ತಾಯಿಸಿ ಅಟ್ಟಹಾಸ ಮೆರೆದಿದ್ದಾರೆ.   ತಮಿಳಿನ ಕೆಲವು ಸಂಘಟನೆಗಳ ನಾಲ್ಕೈದು ಮುಖಂಡರು ಕನ್ನಡಿಗನೊಬ್ಬನನ್ನು ಮನೆಯಿಂದ ಹೊರಗೆಳೆದು ಹಲ್ಲೆ ನಡೆಸಿ ಕಾವೇರಿ ನಮ್ಮದು ಎಂದು ಹೇಳುವಂತೆ ಒತ್ತಾಯಿಸಿ ಮನಬಂದಂತೆ ಥಳಿಸಿದ್ದಾರೆ.   ಮೂರು ಜನ ಸೇರಿ ಹಿಗ್ಗಾಮುಗ್ಗಾ ಅಮಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಅಲ್ಲಿನ ಕನ್ನಡಿಗರು ಭಯಭೀತಗೊಂಡಿದ್ದಾರೆ. ಇದಲ್ಲದೆ ತಮಿಳುನಾಡಿನ ಹಲವೆಡೆ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ದೌರ್ಜನ್ಯ ದಬ್ಬಾಳಿಕೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
Tamil-4

ಸುಪ್ರೀಂಕೋರ್ಟ್ ವಿರೋಧಿಸಿ ಕರ್ನಾಟಕ ಬಂದ್ ಕರೆ ಕೊಟ್ಟಾಗಲು ಕೂಡ ಒಬ್ಬನೇ ಒಬ್ಬನ ತಮಿಳರ ವಿರುದ್ಧ ಯಾವುದೇ ರೀತಿಯ ಎಲ್ಲಿಯೇ ಆಗಲಿ ಒಂದು ಸಣ್ಣ ಹಲ್ಲೆಯೂ ನಡೆದಿರಲಿಲ್ಲ. ಆದರೆ ತಮಿಳುನಾಡಿನಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ ಎಂದು ಕನ್ನಡಪರ ಸಂಘಟನೆಗಳು ವ್ಯಾಪಕವಾಗಿ ಖಂಡಿಸಿದ್ದಾರೆ.  ಅಲ್ಲಿ ಇಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಇದೇ ಸೆ.5 ರಂದು ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ಬೆನ್ನಲ್ಲೆ ತಮಿಳುನಾಡಿನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕೆಲ ತಮಿಳು ಸಂಘಟನೆಗಳು ಕನ್ನಡಿಗರ ಹೊಟೇಲ್‍ವೊಂದರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿ ರಿಸೆಪ್ಷನ್ ಕೌಂಟರ್ ಧ್ವಂಸಗೊಳಿಸಿರುವುದಲ್ಲದೆ, ಬಸ್, ಕಾರುಗಳ ಮೇಲೂ ಕಲ್ಲು ತೂರಾಟ ನಡೆಸಿ ಉದ್ಧಟತನ ಮೆರೆದಿದ್ದಾರೆ.
ಸೆ.5ರಂದು ಸುಪ್ರೀಂಕೋರ್ಟ್ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದ್ದು, ಸಂಕಷ್ಟ ಪರಿಸ್ಥಿತಿಯಲ್ಲೂ ಕರ್ನಾಟಕ ಸರ್ಕಾರ ನೀರು ಬಿಟ್ಟಿದ್ದು, ಇದನ್ನು ವಿರೋಧಿಸಿ ಇಡೀ ರಾಜ್ಯವೇ ಬಂದ್ ಆಚರಿಸಿ ಸ್ತಬ್ಧಗೊಂಡಿತ್ತು.

Tamil-2

ಸುಪ್ರೀಂಕೋರ್ಟ್‍ನಲ್ಲಿ ಇಂದು ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸರ್ಕಾರ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ತಮಿಳು ಸಂಘಟನೆಗಳು ದುರುದ್ದೇಶ ಪೂರ್ವಕವಾಗಿ ತಮಿಳುನಾಡಿನ ಚೆನ್ನೈ, ತಂಜಾವೂರ್, ನಾಗಪಟ್ಟಣ, ತಿರುಚ್ಚಿ ಮುಂತಾದೆಡೆ ಕನ್ನಡಿಗರು ನಡೆಸುತ್ತಿರುವ ಉದ್ಯಮದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಚೆನ್ನೈನಲ್ಲಿರುವ ಕನ್ನಡಿಗರ ಒಡೆತನದ ವುಡ್‍ಲ್ಯಾಂಡ್ ಹೊಟೇಲ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ರಾಮನಾಥಪುರ, ನಾಗಪಟ್ಟಣ, ತಿರುಚ್ಚಿ, ತಂಜಾವೂರಿನಲ್ಲಿ ಎರಡು ಬಸ್‍ಗಳು, ಐದು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಮಿಳುನಾಡು ಸಾರಿಗೆ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

Tamil-3

ಈ ಸಂಬಂಧ 50 ಜನರನ್ನು ಬಂಧಿಸಲಾಗಿದ್ದು, ಕನ್ನಡಿಗರು ನಡೆಸುತ್ತಿರುವ ಉದ್ದಿಮೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ಬಸ್‍ಗಳನ್ನು ರಾಜ್ಯದಿಂದ ತಮಿಳುನಾಡಿಗೆ ಹೋಗುವ ಬಸ್‍ಗಳನ್ನು ನಿಲ್ಲಿಸಲಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕರ್ನಾಟಕದ ನೋಂದಣಿಯ ಹತ್ತಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ : ತಮಿಳಿಗರನ್ನು ಇಲ್ಲಿಂದ ಓಡಿಸಬೇಕಾಗುತ್ತದೆ ಎಚ್ಚರಿಕೆ : ವಾಟಾಳ್
ಬೆಂಗಳೂರು,ಸೆ.12-ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ ಗೃಹ ಸಚಿವ ರಾಜನಾಥ್ ಸಿಂಗ್ ಕೂಡಲೇ ಮಧ್ಯಪ್ರವೇಶಿಸಿ ಅಲ್ಲಿನ ಕನ್ನಡಿಗರಿಗೆ ರಕ್ಷಣೆ ನೀಡಬೇಕು, ತಮಿಳುನಾಡು ಮುಖ್ಯಮಂತ್ರಿ ತಮ್ಮ ಸರ್ವಾಧಿಕಾರ ಧೋರಣೆ ನಿಲ್ಲಿಸದಿದ್ದರೆ ಇಲ್ಲಿನ ತಮಿಳಿಗರನ್ನು ಓಡಿಸಬೇಕಾಗುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.  ತಮಿಳುನಾಡಿನಲ್ಲಿ ಕನ್ನಡಿಗರ ಮನೆಗಳಿಗೆ ನುಗ್ಗಿ ದೌರ್ಜನ್ಯ ನಡೆಸಿ ಥಳಿಸಿರುವ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಾಟಾಳ್ ನಾಗರಾಜ್, ಕಾವೇರಿ ವಿಷಯದಲ್ಲಿ ನಿರಂತರ ಅನ್ಯಾಯವಾಗಿದ್ದರೂ ಕರ್ನಾಟಕದ ಜನ ಸಹನೆ ಕಳೆದುಕೊಂಡಿಲ್ಲ. ಆದರೆ ರಾಜಕೀಯ ದುರದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಅಲ್ಲಿನ ಕನ್ನಡಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುವಂತಹ ದುಷ್ಕøತ್ಯಕ್ಕೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ. ತಮಿಳುನಾಡು ಮುಖ್ಯಮಂತ್ರಿ ಅವರು ರೌಡಿಯಂತೆ ವರ್ತಿಸಬಾರದು. ಇದೇ ರೀತಿ ವರ್ತಿಸಿದರೆ ಇಲ್ಲಿನ ತಮಿಳಿಗರನ್ನು ಕೂಡ ನಾವು ಖಾಲಿ ಮಾಡಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.   ರಾಜ್ಯ ರಾಜ್ಯಗಳ ನಡುವೆ ನಡೆದಿರುವ ವಿವಾದವಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು, ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin