ಪಡಿತರ ಕೂಪನ್‍ಗೆ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

 

devanahalli

ವಿಜಯಪುರ,ಸೆ.12- ಈಗಾಗಲೇ ನ್ಯಾಯಬೆಲೆ ಅಂಗಡಿಗಳಿಂದ ತಿಂಗಳ ರೇಷನ್ ಹಾಗೂ ಸೀಮೆಎಣ್ಣೆ ಪಡೆಯಲು ಕೂಪನ್ ಪಡೆಯಲು ದಿನಗಟ್ಟಲೇ ಸಮಯ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸೀಮೆಎಣ್ಣೆ ಹಾಗೂ ಪಡಿತರ ಪಡೆಯಲು ಕೂಪನ್ ಕಡ್ಡಾಯವಾಗಿದ್ದು, ಪಟ್ಟಣದಲ್ಲಿನ ಎರಡು ಕೂಪನ್ ವಿತರಣಾ ಕೇಂದ್ರಗಳು ಮಹಡಿಯ ಮೇಲಿನ ಕೊಠಡಿಗಳಲ್ಲಿದ್ದು, ಬಹಳಷ್ಟು ವಯಸ್ಸಾದವರಿಗೆ ಮಹಡಿಗಳನ್ನು ಏರುವುದು ಸಮಸ್ಯೆಯಾದರೆ ಕೂಪನ್ ವಿತರಣಾ ಕೇಂದ್ರದ ಬಳಿ ಕೇವಲ ನಾಲ್ಕಾರು ಮಂದಿ ನಿಲ್ಲಲು ಮಾತ್ರ ಅವಕಾಶವಿರುತ್ತದೆ. ಆದರೆ, ಇರುವ ಎರಡು ವಿತರಣಾ ಕೇಂದ್ರಗಳ ಮುಂದೆ ಪಟ್ಟಣದ 14 ನ್ಯಾಯಬೆಲೆ ಅಂಗಡಿಗಳ ಸಾವಿರಾರು ಪಡಿತರ ಚೀಟಿದಾರರು ಪಡಿತರ ಕೂಪನ್‍ಗೆ ಹೋಗಬೇಕಾಗಿದ್ದು, ಬಹಳಷ್ಟು ಕಡೆ ಹೆಂಗಸರು, ಮಕ್ಕಳು, ವೃದ್ದರು, ಎಂಬುದನ್ನು ಲೆಕ್ಕಿಸದೇ ಮೊದಲು ಕೂಪನ್ ಸಿಕ್ಕರೆ ಸಾಕೆಂದು ನೂಕಾಟಗಳು ನಡೆಯುತ್ತಿವೆ.
ಈ ಬಗ್ಗೆ ಆಹಾರ ಇಲಾಖೆ ಇನ್ಸ್‍ಪೆಕ್ಟರ್ ರಘು ಪ್ರತಿಕ್ರಿಯಿಸಿ, ಈಗಾಗಲೇ ಪಟ್ಟಣದಲ್ಲಿ ಎರಡು ಪಡಿತರ ಚೀಟಿ ವಿತರಣ ಕೇಂದ್ರಗಳಿದ್ದು, ಮಹಡಿಯ ಮೇಲಿದ್ದರೂ, ಕೆಳಗಡೆ ಕಾರ್ಯನಿರ್ವಹಿಸಲು ಸೂಚಿಸಿದ್ದು, ಮತ್ತೆ ಎರಡು ಕೇಂದ್ರಗಳಿಗೆ ಅರ್ಜಿ ಬಂದಿದ್ದು, ಸ್ಥಳ ವೀಕ್ಷಿಸಿ, ಜಿಲ್ಲಾಧಿಕಾರಿಗಳಿಗೆ ರಿಪೋರ್ಟ್  ಕಳುಹಿಸಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.ಪಡಿತರ ಚೀಟಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‍ನೊಂದಿಗೆ ನೋಂದಣೆ ಮಾಡಿದ್ದಲ್ಲಿ ಅಂತಹ ಪಡಿತರ ಚೀಟಿದಾರರು ಮೊಬೈಲ್ ಸಂಖ್ಯೆ 161 ಕ್ಕೆ ಕರೆ ಮಾಡಿ, ಸಂಪರ್ಕ ಹೊಂದಿದ ತಕ್ಷಣ 4 ಅನ್ನು ಒತ್ತಿ(ಭಾಷೆ ಬದಲಾವಣೆ ಇನ್ನಾವುದೇ ವಿಷಯಕ್ಕೆ ಅವಕಾಶ ನೀಡದೇ), ಆಗ ಆಹಾರ ಇಲಾಖೆಗೆ ಸಂಪರ್ಕ ಪಡೆಯುತ್ತದೆ ನಂತರ ತಮ್ಮ ಆಧಾರ್‍ನ 12 ಅಂಕಿಗಳನ್ನು ಒತ್ತಿ, ಕೊನೆಗೆ ಸ್ಟಾರ್ ಒತ್ತಬೇಕು. ತಕ್ಷಣವೇ ಮೊಬೈಲ್‍ಗೆ ಎಸ್.ಎಂ.ಎಸ್ ಮೂಲಕ ಬಂದ ಕೂಪನ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿ, ಆಹಾರ ಧಾನ್ಯ ಹಾಗೂ  ಸೀಮೆಎಣ್ಣೆ(ಅರ್ಹರಿದ್ದರೆ) ಪಡೆಯಬಹುದು.ಈ ರೀತಿ ಕೆಲವು ಕ್ಷಣಗಳಲ್ಲಿ ಕೂಪನ್ ಪಡೆದುಕೊಂಡರೆ ಕೆಲಸ-ಕಾರ್ಯ ಬಿಟ್ಟು ಗಂಟೆಗಟ್ಟಲೇ ಕೂಪನ್ ಸೆಂಟರ್ ಮುಂದೆ ಕೂರುವ ಬವಣೆ ತಪ್ಪುತ್ತದೆ ಎಂದು ರಘು ಮಾಹಿತಿ ನೀಡಿದರು.

 

► Follow us on –  Facebook / Twitter  / Google+

 

Facebook Comments

Sri Raghav

Admin